ಶ್ರೀಮಂಗಲ, ಸೆ. 8: ಪೊನ್ನಂಪೇಟೆಯ ಇಗ್ಗುತಪ್ಪ ಸೌಹಾರ್ದ ಸಹಕಾರ ಸಂಘ ಪ್ರಸಕ್ತ ವರ್ಷ ರೂ 48 ಕೋಟಿ ವ್ಯವಹಾರ ನಡೆಸಿದ್ದು, ಇದರಲ್ಲಿ 14.91 ಲಕ್ಷ ನಿವ್ವಳ ಲಾಭ ಗಳಿಸಲಾಗಿದೆ. ಸಂಘವು 14 ಕೋಟಿ ಠೇವಣಿ ಹೊಂದಿದ್ದು, 12.98 ಕೋಟಿ ಸಾಲ ನೀಡಿದೆ ಎಂದು ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಮದ್ರೀರ ಗಿಣಿ ಸೋಮಯ್ಯ ವಿವರಿಸಿದರು.

ಸಂಘದ ಕಛೇರಿ ಆವರಣದಲ್ಲಿ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು 2007ರಲ್ಲಿ ಸ್ಥಾಪನೆಯಾದ ಸಂಘವು 12 ವರ್ಷದಲ್ಲಿ ಈ ಬೆಳವಣಿಗೆಯನ್ನು ಕಂಡಿದೆ. ಸಂಘವು 1500 ಸದಸ್ಯರನ್ನು ಹೊಂದಿದ್ದು, ಕಾರ್ಯವ್ಯಾಪ್ತಿ ವೀರಾಜಪೇಟೆ ತಾಲೂಕು ಮಟ್ಟದಲ್ಲಿದ್ದು, ಈಗ ತಾಲೂಕು ಮರು ವಿಂಗಡಣೆಯಾಗಿರುವದರಿಂದ ಸಂಘದ ಕಾರ್ಯವ್ಯಾಪ್ತಿ ಪೊನ್ನಂಪೇಟೆ ತಾಲೂಕಿಗೆ ಸೀಮಿತ ವಾಗಿರುತ್ತದೆ. ಸಾಲ ವಸೂಲಾತಿ ಶೇ. 98 ರಷ್ಟಿದ್ದು, ಎನ್.ಪಿ.ಎ. ರೂ. 12.81 ಲಕ್ಷ ಕಾಯ್ದಿರಿಸಲಾಗಿದೆ ಎಂದು ಹೇಳಿದರು.

ಪ್ರತಿವರ್ಷ ಸಂಘವು ಶೇ. 15ರ ದರದಲ್ಲಿ ಡಿವಿಡೆಂಟ್ ನೀಡುತ್ತಾ ಬಂದಿದ್ದು, ಪ್ರಸಕ್ತ ವರ್ಷ ಸಂಘದ ನೂತನ ಕಟ್ಟಡ ನಿರ್ಮಾಣವಾಗುತ್ತಿರು ವದರಿಂದ ಕಟ್ಟಡ ನಿಧಿಗೆ ರೂ. 1.75 ಲಕ್ಷ ಹೆಚ್ಚುವರಿ ಕಾಯ್ದಿರಿಸಿರು ವದರಿಂದ ಶೇ. 10 ರಷ್ಟು ಡಿವಿಡೆಂಟ್‍ನ್ನು ಪಾವತಿಸುವ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.

ಗೋಣಿಕೊಪ್ಪದಲ್ಲಿ ಸಂಘದ ಒಂದು ಶಾಖೆ ತೆರೆಯಲಾಗಿದೆ. ವೀರಾಜಪೇಟೆ, ಅಮ್ಮತ್ತಿ, ಕುಶಾಲನಗರ ಇತ್ಯಾದಿ ಕಡೆ ಶಾಖೆ ತೆರೆಯುವ ಉದ್ದೇಶವಿದೆ. ಪ್ರಪ್ರಥಮವಾಗಿ ಸಂಪೂರ್ಣ ಗಣಕೀಕೃತಗೊಂಡಿರುವ ಏಕೈಕÀ ಸಹಕಾರಿ ಸÀಂಘ ಎಂಬ ಹೆಗ್ಗಳಿಕೆ ನಮ್ಮ ಸಂಘದ್ದಾಗಿದೆ.

ಕೇವಲ 12 ಆರ್ಥಿಕ ವರ್ಷಗಳಲ್ಲಿ ಮಾಡಿರುವ ಪ್ರಗತಿಗೆ ಕಾಣಿಕೆಯಾಗಿ 50 ವರ್ಷದೊಳಗಿನ ಸಂಘದ ಸದಸ್ಯರುಗಳು ರೂ. 10 ಸಾವಿರ ಪಾವತಿಸಿದರೆ ದುರಾದೃಷ್ಟವಶಾತ್ ಮರಣಪಟ್ಟಲ್ಲಿ 1 ಲಕ್ಷ ಮೊತ್ತದ ಜೀವನಿಧಿಯನ್ನು ಪಾವತಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಅಲ್ಲದೆ ಸಾಲಗಾರರ ಕ್ಷೇಮಾಭಿವೃದ್ಧಿ ನಿಧಿಯನ್ನು ಸ್ಥಾಪಿಸಿ ಸಾಲಗಾರನೊಬ್ಬನು ತನ್ನ ಸಾಲ ಮರುಪಾವತಿಯ ಅವಧಿ ಮುನ್ನ ಮೃತಪಟ್ಟಲ್ಲಿ ಜಾಮೀನುದಾರರಿಗೂ ಮತ್ತು ಕುಟುಂಬದವರಿಗೂ ಸಹಾಯವಾಗುವಂತೆ ರೂ. 60 ಸಾವಿರ ಪಾವತಿಸುವ ನಿಧಿ ಸ್ಥಾಪಿಸಲಾಗಿದ್ದು, ಅವರುಗಳ ಕಷ್ಟ ಕಾಲಕ್ಕೆ ಸಹಾಯ ಮಾಡುವ ವ್ಯವಸ್ಥೆ ಇರುತ್ತದೆ.

ಈ ಮೊಬಲಗನ್ನು 1 ಲಕ್ಷಕ್ಕೆ ಏರಿಸುವ ಉದ್ದೇಶವಿದೆ ಎಂದು ಗಿಣಿ ಸೋಮಯ್ಯ ವಿವರಿಸಿದರು.

ಗೋಣಿಕೊಪ್ಪ ಶಾಖೆಯಲ್ಲಿ ಇ-ಸ್ಟಾಂಪ್ ಸೌಲಭ್ಯದೊಂದಿಗೆ ಪ್ರವಾಸಿಗರಿಗೆ ದೂರದ ದೇಶಗಳಿಗೆ ಹೋಗಲು ರೈಲ್ವೆ-ವಿಮಾನ ಬುಕ್ಕಿಂಗ್ ಹಾಗೂ ಆರ್.ಟಿ.ಸಿ. ಸೌಲಭ್ಯವಿರುತ್ತದೆ. ಟಿವಿ-ಮೊಬೈಲ್ ರೀಚಾರ್ಜ್, ಇತ್ಯಾದಿ ಅನೇಕ ಸೌಲಭ್ಯಗಳಿರುತ್ತದೆ ಎಂದು ಹೇಳಿದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ಕಡೇಮಾಡ ಮಣಿ ಭೀಮಯ್ಯ, ನಿರ್ದೇಶಕರುಗಳಾದ ಚಿರಿಯಪಂಡ ಕೆ. ಕಾಶಿಯಪ್ಪ, ಅರಮಣಮಾಡ ಮಿಟ್ಟು ಬೋಪಯ್ಯ, ಅಲೇಮಾಡ ಎ. ಶ್ರೀನಿವಾಸ್, ಕೋದೇಂಗಡ ಎಸ್. ಸುರೇಶ್, ಕಳ್ಳಿಚಂಡ ಡಾಲಿ ಕುಶಾಲಪ್ಪ, ಐನಂಡ ಸುಬ್ರಮಣಿ ಮಂದಣ್ಣ, ಕೂಕಂಡ ರಾಜಾ ಕಾವೇರಪ್ಪ, ಕಬ್ಬಚ್ಚೀರ ಚಿದಂಬರ, ಕುಳ್ಳಿಚಂಡ ಪ್ರಭು ನಂಜಪ್ಪ, ಮುದ್ದಿಯಡ ಪ್ರಕಾಶ್, ಮಾಣಿಪಂಡ ಪಾರ್ವತಿ, ಡಾ. ನೆಲ್ಲೀರ ನಿಖಿತ

ಸÀಚಿನ್, ಮತ್ತು ಸಿ.ಇ.ಓ ಮದ್ರೀರ ಎಸ್. ಗಣಪತಿ ಹಾಜರಿದ್ದರು.