ಸುಂಟಿಕೊಪ್ಪ: ಸುಂಟಿಕೊಪ್ಪ ಹೋಬಳಿ ಬಿಲ್ಲವ ಸೇವಾ ಸಂಘದ ವತಿಯಿಂದ ನೂತನವಾಗಿ ಬಿಲ್ಲವ ವಿದ್ಯಾರ್ಥಿ ಘಟಕಕ್ಕೆ ಅಧ್ಯಕ್ಷರಾಗಿ ಬಿ.ಎಸ್. ಆದಿತ್ಯ, ಕಾರ್ಯದರ್ಶಿಯಾಗಿ ಬಿ.ಆರ್. ಅಶ್ವಿತ್, ಅವರನ್ನು ನೇಮಕಗೊಳಿಸಲಾಯಿತು.

ವಿದ್ಯಾರ್ಥಿ ಘಟಕದ ಉಪಾಧ್ಯಕ್ಷರಾಗಿ ಬಿ.ಎಸ್. ಪ್ರೀತಮ್, ಸಂಘಟನಾ ಕಾರ್ಯದರ್ಶಿಯಾಗಿ ಬಿ.ಆರ್. ದರ್ಶನ್, ಸಾಂಸ್ಕøತಿಕ ಕಾರ್ಯದರ್ಶಿಗಳಾಗಿ ಬಿ.ಆರ್. ಕೃತಿಕಾ, ಬಿ.ಆರ್. ಕೀರ್ತಿ, ಆಯ್ಕೆಯಾದರು.

ಈ ಸಂದರ್ಭ ಸುಂಟಿಕೊಪ್ಪ ಹೋಬಳಿಯ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎಂ. ಮುಖೇಶ್, ಪದಾಧಿಕಾರಿಗಳಾದ ನಾಗೇಶ್ ಪೂಜಾರಿ ಹಾಗೂ ಇತರರು ಉಪಸ್ಥಿತರಿದ್ದರು.

ವೀರಾಜಪೇಟೆ: ವೀರಾಜಪೇಟೆಯ ಕಾವೇರಿ ಪದವಿ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವೃಂದದವರಿಗೆ ವಿವಿಧ ಮನೋರಂಜನೆಯ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎ.ಎಂ. ಕಮಲಾಕ್ಷಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಣಯ್ಯ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ. ಎಂ.ಎಂ. ದೇಚಮ್ಮ ಹಾಗೂ ಕಾಲೇಜಿನ ಹಿರಿಯ ಸಿಬ್ಬಂದಿಗಳಾದ ಜಯಕುಮಾರ್, ಕರಣ್ ಕುಮಾರ್, ಕೆ.ಜಿ. ವೀಣಾ ಹಾಗೂ ರಾಘವೇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರೊ. ಕಮಲಾಕ್ಷಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಎ.ಎಂ. ಪೊನ್ನಣ್ಣ ಮಾತನಾಡಿದರು.

ಮಡಿಕೇರಿ: ಗೋಣಿಕೊಪ್ಪ ಲಯನ್ಸ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಗೋಣಿಕೊಪ್ಪ ಲಯನ್ಸ್ ಅಧ್ಯಕ್ಷ ನಿತಿ ಪೂಣಚ್ಚ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಗೋಣಿಕೊಪ್ಪ ಕಾವೇರಿ ಕಾಲೇಜಿನ ನಿವೃತ್ತ ಉಪ ಪ್ರಾಂಶುಪಾಲೆ ಪೆಮ್ಮಂಡ ಗೀತ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ವಿದ್ಯಾರ್ಥಿನಿ ಯಾನ ಮುತ್ತಮ್ಮಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನೃತ್ಯ ನೀಲಮ್ಮ ಸರ್ವರನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ಹಲವಾರು ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿದ್ದರು.

ಗೌರವ ಸ್ವೀಕರಿಸಿ ಸಭೆಯನ್ನುದ್ದೇಶಿಸಿ ಗೀತ ಪೆಮ್ಮಂಡ ಮಾತನಾಡಿದರು. ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಡಾ. ಅಮ್ಮಂಡ ಚಿಣ್ಣಪ್ಪ, ಲಯನ್ಸ್ ಚಾರಿಟೇಬಲ್ ಟ್ರಸ್ಟ್‍ನ ಅದ್ಯಕ್ಷ ಕೊಡಂದೇರ ಚಂಗಪ್ಪ, ಉಪಾಧ್ಯಕ್ಷ ಕೊಂಗಂಡ ಸುಬ್ಬಯ್ಯ, ಕಾರ್ಯದರ್ಶಿ ಪಾರುವಂಗಡ ಪೆಮ್ಮಯ್ಯ, ಖಜಾಂಚಿ ಪಟ್ಟಡ ದನು ಉತ್ತಯ್ಯ, ಮಾಜಿ ಲಯನ್ಸ್ ಜಿಲ್ಲಾ ಗವರ್ನರ್ ಚೆಪ್ಪುಡಿರ ಮುತ್ತಣ್ಣ ಉಪಸ್ಥಿತರಿದ್ದರು.

ಅತಿಥಿಗಳಾಗಿ ಪ್ರಾಂತೀಯ ಅಧ್ಯಕ್ಷ ಪಿ.ಪಿ. ಸೋಮಣ್ಣ ಹಾಗೂ ವಲಯಾಧ್ಯಕ್ಷ ದಾಮೋದರ್ ಆಗಮಿಸಿದ್ದರು.

ಚೆಟ್ಟಳ್ಳಿ: ಸಮೀಪದ ಪೊನ್ನತ್‍ಮೊಟ್ಟೆಯ ಮೌನತುಲ್ ಇಸ್ಲಾಂ ಮದರಸ ವತಿಯಿಂದ ಇಸ್ಲಾಮಿಕ್ ಹೊಸ ವರ್ಷ(ಹಿಜರಿ ವರ್ಷ)ವನ್ನು ಮದರಸದಲ್ಲಿ ಆಚರಿಸಲಾಯಿತು.

ಈ ಸಂದರ್ಭ ಮಾತನಾಡಿದ ಮದರಸ ಪ್ರಾಂಶುಪಾಲ ಶಹದ್ ಫೈಝಿ ಚೋಕಂಡಳ್ಳಿ, ವಿದ್ಯಾರ್ಥಿಗಳು ಗುರು-ಹಿರಿಯರಿಗೆ ಗೌರವ ನೀಡುವ ಮೂಲಕ ತಮ್ಮ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಅಲ್ಲದೇ ಇಸ್ಲಾಮಿನ ನಿಯಮಗಳನ್ನು ಪಾಲಿಸಿ ಉತ್ತಮ ವಿದ್ಯಾರ್ಥಿಗಳಾಗಬೇಕೆಂದರು.

ಮದರಸ ನಾಯಕ ಶಿಬಿಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭ ಜಲಾಲ್ ಮೌಲವಿ, ಮೌದು ಸಖಾಫಿ, ಸಾಹಿತ್ಯ ಸಮಾಜ ಅಧ್ಯಕ್ಷ ಸವಾದ್, ಕಾರ್ಯದರ್ಶಿ ಸಿದ್ದೀಖ್ ಇದ್ದರು.ಒಡೆಯನಪುರ/ಆಲೂರು-ಸಿದ್ದಾಪುರ: ಕ್ರೀಡಾ ಚಟುವಟಿಕೆಯಿಂದ ವಿದ್ಯಾರ್ಥಿಗಳು ಪ್ರಾಮಾಣಿಕತೆ, ಸಹೋದರತ್ವ ಮುಂತಾದ ಮಾನವೀಯ ಮೌಲ್ಯಗಳನ್ನು ಕಲಿತುಕೊಳ್ಳಲು ಸಾಧ್ಯವಾಗುತ್ತದೆ ಎಂದು ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಿ.ಎಸ್. ಮಚ್ಚಾಡೋ ಅಭಿಪ್ರಾಯಪಟ್ಟರು.

ಸಮೀಪದ ಆಲೂರು-ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ತಾಲೂಕುಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿ.ಪಂ. ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ, ಮಾಜಿ ಜಿ.ಪಂ. ಸದಸ್ಯ ಡಿ.ಬಿ. ಧರ್ಮಪ್ಪ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಬಿ.ಇ.ಒ. ನಾಗರಾಜಯ್ಯ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎನ್. ಮಂಜುನಾಥ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲೆ ಕೆ.ಎನ್. ಭಾರತಿ, ಆಲೂರು-ಸಿದ್ದಾಪುರ ಗ್ರಾ.ಪಂ. ಪಿಡಿಓ ಪೂರ್ಣಿಮಾ, ಗೋಣಿಮರೂರು ಕ್ಲಸ್ಟರ್ ಸಿಆರ್‍ಪಿ ಚಿಣ್ಣಪ್ಪ, ಜಿಲ್ಲಾ ದೈಹಿಕ ಶಿಕ್ಷಣ ಇಲಾಖೆ ಅಧಿಕಾರಿ ಹೆಚ್.ಎ. ವೆಂಕಟೇಶ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ವಿ.ಎಲ್. ಪರಮೇಶ್ವರಪ್ಪ, ತಾಲೂಕು ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕರುಂಬಯ್ಯ, ಲೀಲಾ ದೇವದಾಸ್ ಮುಂತಾದವರು ಹಾಜರಿದ್ದರು.

ಚೆಟ್ಟಳ್ಳಿ: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಅಧೀನದಲ್ಲಿರುವ ಕೂರ್ಗ್ ಜಂಇಯ್ಯತುಲ್ ಉಲಮಾ ಸದಸ್ಯತ್ವ ದಿನ ಹಾಗೂ ಶರಫುಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮಕ್ಕೆ ಧ್ವಜಾರೋಹಣ ಮೂಲಕ ಶೈಖುನಾ ಅಹ್ಸನಿ ಉಸ್ತಾದ್ ಚಾಲನೆ ನೀಡಿದರು.

ಸದಸ್ಯತ್ವ ಅಭಿಯಾನವನ್ನು ಅನ್ವಾರುಲ್ ಹುದಾ ದಅವಾ ಪ್ರಾಂಶುಪಾಲ ಅಬ್ದುರ್ರಶೀದ್ ಸಅದಿ ಉಸ್ತಾದ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅನ್ವಾರುಲ್ ಹುದಾ ಮುದರ್ರಿಸರಾದ ಅಬ್ದುರ್ರಹ್ಮಾನ್ ಅಹ್ಸನಿ, ಜುನೈದ್ ಅನ್ವಾರಿ ಅಲ್-ಅಹ್ಸನಿ, ಖಮರುದ್ದೀನ್ ಅನ್ವಾರಿ ಅಸ್ಸಖಾಫಿ, ಅಬ್ದುಲ್ ಜಲೀಲ್ ಅಮೀನಿ ಉಪಸ್ಥಿತರಿದ್ದರು.

ವೀರಾಜಪೇಟೆ: ವಿದ್ಯಾರ್ಥಿಗಳ ಪ್ರತಿಭೆಗೆ ಪೋಷಕರು ಆದ್ಯತೆ ನೀಡಬೇಕು. ತಮ್ಮ ಮಕ್ಕಳು ಎಲ್ಲಿ ಎಡವುತ್ತಿದ್ದಾರೆ ಎಂಬದನ್ನು ಗಮನಿಸಿ ಅವರನ್ನು ಸರಿದಾರಿಗೆ ತರುವಂತಾಗಬೇಕು ಎಂದು ಸಂತ ಅನ್ನಮ್ಮ ದೇವಾಲಯದ ಧರ್ಮಗುರು ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಮದಲೈಮುತ್ತು ಹೇಳಿದರು.

ವೀರಾಜಪೇಟೆ ಸಂತ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿ ಪೋಷಕರ ದಿನಾಚರಣೆಯ ಅಂಗವಾಗಿ ಪೋಷಕರ-ಪಾಲಕರ ಸಂಘದ 32ನೇ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕರುಗಳಾದ ಮಾರ್ಗರೆಟ್ ಲಸ್ರಾದೊ, ಚಂದ್ರಹಾಸ ಭಟ್, ವಿಜಯ ಕುಮಾರ್, ವೆಲ್ಪ್ರೇಡ್ ಗೋನ್ಸಾಲ್ವೇಸ್, ಜೇಮ್ಸ್ ಲೋಬೋ, ಸವೆರೀನಿ ಲೋಬೊ, ಇವರುಗಳಿಗೆ ಸನ್ಮಾನಿಸಿ, ಗೌರವಿಸಿದರು.

ಈ ಸಂದರ್ಭ ಪೋಷಕ-ಪಾಲಕ-ಶಿಕ್ಷಕರ ಸಂಘದ ಉಪಾಧ್ಯಕ್ಷೆ ಆಶಾ ಸುಬ್ಬಯ್ಯ, ಸಂತ ಅನ್ನಮ್ಮ ದೇವಾಲಯದ ಸಹಾಯಕ ಗುರು ರೋಷನ್ ಬಾಬು, ಪದವಿ ಕಾಲೇಜಿನ ಪ್ರಾಂಶುಪಾಲೆ ರೋನಿ ರವಿಕುಮಾರ್, ಪ್ರೌಢ ವಿಭಾಗದ ಬೆನ್ನಿ ಜೋಸೆಫ್, ಪ್ರಾಥಮಿಕ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರಮೀಳಾ ಡಿಸೋಜಾ, ಜಂಟಿ ಕಾರ್ಯದರ್ಶಿ ಜೊನಾಥನ್ ಮುಂತಾದವರು ಉಪಸ್ಥಿತರಿದ್ದರು.

*ಗೋಣಿಕೊಪ್ಪಲು: ಪ್ರಜಾಪ್ರಭುತ್ವದ ಭದ್ರಬುನಾದಿ ಮತದಾನದಲ್ಲಿ ಅಡಗಿದೆ ಎಂದು ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಹೇಳಿದರು.

ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ಉದ್ಘಾಟಿಸಿ ಮಾತನಾಡಿದ ಅವರು, ಸ್ಥಳೀಯ ಆಡಳಿತದಿಂದ ಹಿಡಿದು ಸಂಸತ್‍ವರೆಗೆ ಹತ್ತು ಹಲವು ಚುನಾವಣೆಗಳು ನಡೆಯುತ್ತಿವೆ. ಇದಕ್ಕೆಲ್ಲ ಸಾವಿರಾರು ಕೋಟಿ ಹಣ ವ್ಯಯವಾಗುತ್ತಿದೆ. ಆದರೂ ವಿದ್ಯಾವಂತರೆನಿಸಿಕೊಂಡವರೇ ಮತದಾನದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ವಿಷಾದಿಸಿದರು.

ಪ್ರಾಂಶುಪಾಲ ಡಾ. ಜೆ. ಸೋಮಣ್ಣ ಮಾತನಾಡಿ, ಮತದಾನದ ಬಗೆಗಿನ ಅಜ್ಞಾನವನ್ನು ಹೋಗಲಾಡಿಸಲು ಚುನಾವಣಾ ಸಾಕ್ಷರತಾ ಕ್ಲಬ್ ಮೂಲಕ ಶ್ರಮಿಸಬೇಕಾಗಿದೆ ಎಂದರು. ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಕೋಶಾಧಿಕಾರಿ ಅಡ್ಡೇಂಗಡ ದೇವಯ್ಯ, ಸಹಕಾರ್ಯದರ್ಶಿ ಪೋಡಮಾಡ ಮೋಹನ್, ನಿರ್ದೇಶಕ ಅಳಮೇಂಗಡ ಸುರೇಶ್ ಸುಬ್ಬಯ್ಯ, ಉಪನ್ಯಾಸಕ ಎನ್.ಕೆ. ಪ್ರಭು, ಮುಖ್ಯ ಶಿಕ್ಷಕ ಕೆ. ಚಂದ್ರಶೇಖರ್, ಚುನಾವಣಾ ಸಾಕ್ಷರತಾ ಕ್ಲಬ್ ಸಂಚಾಲಕ ಡಿ.ಎನ್. ಸುಬ್ಬಯ್ಯ, ಶಿಕ್ಷಕರಾದ ರಾಘವೇಂದ್ರ, ಬೆನಡಿಕ್ಟ್ ಫರ್ನಾಂಡೀಸ್ ಹಾಜರಿದ್ದರು.ಸುಂಟಿಕೊಪ್ಪ: ಬಸವನಹಳ್ಳಿ ಸರಕಾರಿ ಪ್ರೌಢಶಾಲೆ ಮೈದಾನದಲ್ಲಿ ಸೋಮವಾರಪೇಟೆ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆಯ ಫುಟ್ಬಾಲ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡು ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿದೆ.

ಕುಶಾಲನಗರ ಫಾತೀಮಾ ಪ್ರೌಢಶಾಲೆಯ ತಂಡವನ್ನು 1-0 ಗೋಲಿನಿಂದ ಪರಾಜಿತಗೊಳಿಸಿ ಜಿಲ್ಲಾಮಟ್ಟಕ್ಕೆ ಅರ್ಹತೆ ಪಡೆದಿದೆ.

ಹಾಗೆಯೇ ವಲಯ ಮಟ್ಟದ ವಿವಿಧ ಕ್ರೀಡೆ ಹಾಗೂ ಮೇಲಾಟದಲ್ಲೂ ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಜಯಗಳಿಸಿದ್ದು ಶಾಲೆಗೆ ಕೀರ್ತಿ ತಂದಿದ್ದಾರೆ.

ಮಡಿಕೇರಿ: ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು, ರಾಷ್ಟೀಯ ಸೇವಾ ಯೋಜನಾ ಘಟಕ, ರೆಡ್ ರಿಬ್ಬನ್ ಕ್ಲಬ್ ಮತ್ತು ರೆಡ್ ಕ್ರಾಸ್ ಘಟಕ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ‘ಪೋಷಣಾ ಅಭಿಯಾನ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭÀ ಜರುಗಿತು. ಕಾಲೇಜಿನ ಪ್ರಾಂಶುಪಾಲೆ ಪ್ರೊ. ಚಿತ್ರಾ ವೈ ಉದ್ಘಾಟಿಸಿದರು. ಕಾರ್ಯಕ್ರಮದ ಬಗ್ಗೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ ಕೆ.ಸಿ. ದಯಾನಂದ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಮೈಸೂರು ಮಹಾರಾಣಿ ಕಾಲೇಜಿನ ಪ್ರಾಧ್ಯಾಪಕಿ ಪ್ರೊ. ಶೋಭ ಭಾಗವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲಕ ಪ್ರೊ. ಶಶಿಧರ್ ಬಿ.ಆರ್. ಇದ್ದರು.

ಗೋಣಿಕೊಪ್ಪ ವರದಿ: ಸಿಐಎಸ್‍ಸಿ ರಾಷ್ಟ್ರಮಟ್ಟದ ಬಾಲಕ, ಬಾಲಕಿಯರ ಶೂಟಿಂಗ್ ಸ್ಪರ್ಧೆಯಲ್ಲಿ ಜಯಗಳಿಸಿರುವ ಇಲ್ಲಿನ ಕಾಲ್ಸ್ ಶಾಲೆಯ ಮೂವರು ಕ್ರೀಡಾಪಟುಗಳು ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಆಶ್ರಯದಲ್ಲಿ ನಡೆಯಲಿರುವ ಟೂರ್ನಿಗೆ ಆಯ್ಕೆಯಾಗಿದ್ದಾರೆ.

ಅಹಮದಾಬಾದ್‍ನ ಮಿಲಿಟರಿ ಟ್ರೇನಿಂಗ್ ಅಕಾಡೆಮಿ ರೇಂಜ್‍ನಲ್ಲಿ ಆಯೋಜಿಸಿದ್ದ ಸಿಐಎಸ್‍ಸಿ ರಾಷ್ಟ್ರಮಟ್ಟದ ವೈಯಕ್ತಿಕ ಶೂಟಿಂಗ್ ಸ್ಪರ್ಧೆಯಲ್ಲಿ ಕಾಲ್ಸ್ ಶಾಲೆಯ 16 ಕ್ರೀಡಾಪಟುಗಳು ಭಾಗವಹಿಸಿದ್ದರು. ಇವರಲ್ಲಿ ತರಾನ ರಮೇಶ್, ರೀಯಾ ಅಮಿತ್ ಹಾಗೂ ವಿತನ್ ಬೆಳ್ಳಿಯಪ್ಪ ಪದಕ ಪಡೆದು, ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಆಶ್ರಯದಲ್ಲಿ ನಡೆಯಲಿರುವ ಟೂರ್ನಿಗೆ ಪ್ರವೇಶ ಪಡೆದುಕೊಂಡಿದ್ದಾರೆ.

ಮಡಿಕೇರಿ: ಮೂರ್ನಾಡು ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯನ್ನು ಆಚರಿಸಿದರು. ಕಾಲೇಜಿನ ಆವರಣದಲ್ಲಿ ನಡೆದ ಆಚರಣೆಯಲ್ಲಿ ಮೊದಲು ಪ್ರಾಂಶುಪಾಲರನ್ನು ಮತ್ತು ಉಪನ್ಯಾಸಕ ವರ್ಗದವರನ್ನು ಆತ್ಮೀಯವಾಗಿ ಹೂಗುಚ್ಚಗಳನ್ನು ನೀಡುವ ಮೂಲಕ ಬರಮಾಡಿಕೊಂಡರು. ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ವಿದ್ಯಾರ್ಥಿಗಳು ಬಹುಮಾನವನ್ನು ವಿತರಿಸಿದರು. ಪ್ರಾಂಶುಪಾಲರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ನೆರೆದಿದ್ದ ಸಮಸ್ತರಿಗೂ ಸಿಹಿ ವಿತರಿಸಲಾಯಿತು.ಗೋಣಿಕೊಪ್ಪ ವರದಿ: ಕಾವೇರಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ 1 ಲಕ್ಷ ಬೀಜದುಂಡೆ ತಯಾರಿಸಿ ಅರಣ್ಯೀಕರಣಕ್ಕೆ ಮುಂದಾಗಲು ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದು ಕಾವೇರಿ ಕಾಲೇಜು ಎನ್‍ಎಸ್‍ಎಸ್ ಯೋಜನಾಧಿಕಾರಿ ವನಿತ್‍ಕುಮಾರ್ ಹೇಳಿದರು.

ಮುಳಿಯ ಫೌಂಡೇಷನ್, ಕಾವೇರಿ ಕಾಲೇಜು, ಕಾವೇರಿ ಪದವಿ, ಪದವಿಪೂರ್ವ ಎನ್‍ಎಸ್‍ಎಸ್ ಸಹಯೋಗದಲ್ಲಿ ಇಲ್ಲಿನ ಕಾವೇರಿ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಬೀಜದುಂಡೆ ತಯಾರಿ ಕಾರ್ಯಾಗಾರದಲ್ಲಿ ಅವರು ಮಾಹಿತಿ ನೀಡಿದರು.

ಪ್ರಕೃತಿ ವಿಕೋಪದಿಂದ ಮರಗಳ ನಾಶ ಹೆಚ್ಚಾಗುತ್ತಿರುವದರಿಂದ ನಾಶವಾಗಿರುವ ಕಡೆಗಳಲ್ಲಿ ಬೀಜ ಬಿತ್ತುವ ಯೋಜನೆ ರೂಪಿಸಿಕೊಳ್ಳಲಾಗಿದೆ. ಇದರಂತೆ 1 ಲಕ್ಷ ಬೀಜದುಂಡೆ ಎನ್‍ಎಸ್‍ಎಸ್ ಕಾರ್ಯಕರ್ತರಿಂದ ತಯಾರಿಸಲಾಗುತ್ತಿದೆ. ಕಾಡು ಮರಗಳ ಬೀಜಗಳನ್ನು ಸಂಗ್ರಹಿಸಿ ಬಿತ್ತನೆ ಮಾಡಲಾಗುವದು. ಇಂತಹ ಪ್ರಯೋಗಗಳು ಪರಿಸರಪೂರಕವಾಗುವ ವಿಶ್ವಾಸವಿದೆ ಎಂದರು.

ಕಾವೇರಿ ಎಜುಕೇಶನ್ ಸೊಸೈಟಿ ಉಪಾಧ್ಯಕ್ಷ ಸಿ.ಬಿ. ದೇವಯ್ಯ ಉದ್ಘಾಟಿಸಿ ಮಾತನಾಡಿ, ಪ್ರಕೃತಿ ನಾಶದಿಂದ ಆಗುತ್ತಿರುವ ನಷ್ಟದ ಬಗ್ಗೆ ಗಂಭೀರ ಚಿಂತನೆ ವಿದ್ಯಾರ್ಥಿಗಳಲ್ಲಿ ಬರಬೇಕಿದೆ ಎಂದರು. ಮುಳಿಯ ಫೌಂಡೇಷನ್ ವ್ಯವಸ್ಥಾಪಕ ಜಯಪ್ರಕಾಶ್ ಮಾತನಾಡಿ, ವೈಜ್ಞಾನಿಕ ರೀತಿಯಲ್ಲಿ ಬೀಜದುಂಡೆ ತಯಾರಿಸಿ, ಮರಗಳ ಬೀಜಗಳನ್ನು ಬಿತ್ತಲಾಗುವದು ಎಂದರು.

ಗೋಣಿಕೊಪ್ಪ ಪ್ರೆಸ್‍ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿ, ಕೃಷಿಯತ್ತ ಹೆಚ್ಚು ಒಲವು ತೋರಿಸುವ ಮೂಲಕ ಪ್ರಕೃತಿ ಸಂರಕ್ಷಣೆಗೆ ಯುವ ಸಮೂಹ ಮುಂದಾಗಬೇಕಿದೆ ಎಂದರು.

ಪ್ರಾಂಶುಪಾಲ ಪ್ರೊ. ಕೆ.ವಿ. ಕುಸುಮಾಧರ್ ಮಾತನಾಡಿ, ಪ್ರಕೃಷಿ ಸಂರಕ್ಷಣೆಯ ಜವಾಬ್ದಾರಿ ಮಹತ್ವವಾಗಿದೆ ಎಂದರು. ಸುಮಾರು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಎನ್‍ಎಸ್‍ಎಸ್ ಅಧಿಕಾರಿಗಳಾದ ಎನ್.ಪಿ. ರೀತಾ, ಎಸ್.ಆರ್. ತಿರುಮಲ್ಲಯ್ಯ ಉಪಸ್ಥಿತರಿದ್ದರು.

ಸೋಮವಾರಪೇಟೆ: ಒಕ್ಕಲಿಗರ ಸಂಘದ ಚಾಣಕ್ಯ ಪದವಿ ಕಾಲೇಜಿನಲ್ಲಿ ರೋಟರ್ಯಾಕ್ಟ್ ಕ್ಲಬ್ ಆಫ್ ಸ್ಪಂದನ ಸೋಮವಾರಪೇಟೆ ಹಿಲ್ಸ್ ಸಂಸ್ಥೆಗೆ ರೋಟರಿ ಅಧ್ಯಕ್ಷ ಡಿ.ಪಿ. ರಮೇಶ್ ಚಾಲನೆ ನೀಡಿದರು.

ರೋಟರ್ಯಾಕ್ಟ್ ಅಧ್ಯಕ್ಷರಾಗಿ ಬಿ.ಎಸ್.ಡಬ್ಲ್ಯೂ. ವಿದ್ಯಾರ್ಥಿ ಕೆ.ಟಿ. ಹೃತ್ವಿಕ್ ಹಾಗೂ ಕಾರ್ಯದರ್ಶಿಯಾಗಿ ಬಿ.ಕಾಂ. ವಿದ್ಯಾರ್ಥಿ ಡಿ.ಬಿ. ನಿಖಿಲ್ ಆಯ್ಕೆಯಾದರು.

ರೋಟರಿ ಸಹಾಯಕ ರಾಜ್ಯಪಾಲ ಪಿ. ನಾಗೇಶ್, ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಪಿ.ಕೆ. ರವಿ, ಕಾರ್ಯದರ್ಶಿ ಹೆಚ್.ಸಿ. ಲೋಕೇಶ್, ಕಾಲೇಜಿನ ಪ್ರಾಂಶುಪಾಲ ಹೆಚ್.ಬಿ. ಬೆಳಿಯಪ್ಪ ಇದ್ದರು.

ಮಡಿಕೇರಿ: ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘದ ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭವೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀ, ಹೆಣ್ಣು ಮಕ್ಕಳಿಗೆ ಸಾಧಿಸುವ ಛಲ ಇದ್ದರೆ ಉನ್ನತ ಸ್ಥಾನಕ್ಕೆ ತಲಪುವದರಲ್ಲಿ ಯಾವದೇ ಸಂದೇಹ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜೀವನ ರೂಪಿಸುವಲ್ಲಿ ಶಿಕ್ಷಕರ ಮಹತ್ವದ ಕುರಿತು ಹೇಳುತ್ತಾ ಶಿಕ್ಷಕರು ಸಮಾಜದ ನಿರ್ಮಾತೃಗಳಾಗಿದ್ದಾರೆ. ಶಿಕ್ಷಕರಿಗೆ ಸಲ್ಲಬೇಕಾದ ಗೌರವಗಳನ್ನು ನೀಡಿದಾಗ ವಿದ್ಯಾರ್ಥಿಗಳ ಜೀವನವೂ ಉತ್ತಮ ರೀತಿಯಲ್ಲಿ ರೂಪುಗೊಳ್ಳಲು ಸಾಧ್ಯವೆಂದು ನುಡಿದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಸಾಹಿತಿ ಷಂಶುದ್ದಿನ್, ಪ್ರತಿಯೊಬ್ಬರೂ ಸಣ್ಣ ವಯಸ್ಸಿನಿಂದಲೇ ಸಾಹಿತ್ಯ ಪ್ರೇಮ ಬೆಳೆಸಿಕೊಳ್ಳಬೇಕು. ಪುಸ್ತಕ ಓದುವ ಅಭಿರುಚಿ ರೂಡಿಸಿಕೊಳ್ಳಬೇಕು.ಇವೆಲ್ಲವೂ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುತ್ತದೆ ಎಂದರು.

ಈ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾಗಿ ನೇಮಕಗೊಂಡಿದ್ದ ವಿದ್ಯಾರ್ಥಿನಿಯರಿಗೆ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾದ್ಯಾಪಕಿ ಡಾ. ಡಿ.ಕೆ. ಸರಸ್ವತಿ ಪ್ರತಿಜ್ಞಾ ವಿಧಿ ಭೋದಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಡಿ.ಜೆ. ಜವರಪ್ಪ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಕೆ.ಕೆ. ಮಹೇಶ್ ಸ್ವಾಗತಿಸಿ, ಡಿ. ಕನ್ನಿಕಾ ಸಹಾಯಕ ಪ್ರಾಧ್ಯಾಪಕರು ಪ್ರಾಸ್ತಾವಿಕ ಮಾತನಾಡಿದರು.

ವೇದಿಕೆಯಲ್ಲಿ ವಿದ್ಯಾರ್ಥಿ ಸಂಘದ ಪದಾಧಿಕಾರಿ ಹರ್ಷಿತಾ, ಉಪಾಧ್ಯಾಕ್ಷೆ ಆ್ಯಸಿನ್ ಜೋತಿ ಪರೇರಾ, ಕಾರ್ಯದರ್ಶಿ ಶ್ರೀಜಾ, ಜಂಟಿ ಕಾರ್ಯದರ್ಶಿ ಬಿಂದು, ಸಾಂಸ್ಕøತಿಕ ಕಾರ್ಯದರ್ಶಿ ದೀಕ್ಷಿತಾ, ಕ್ರೀಡಾ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ನಾಯಕಿಯರಾದ ದಿವ್ಯಾ ಮತ್ತು ಕೀರ್ತನಾ ಉಪಸ್ಥಿತರಿದ್ದರು.

ಉಪನ್ಯಾಸಕಿ ಪೂರ್ಣಿಮಾ ನಿರೂಪಿಸಿ, ರಿಶಾನಾ ಮತ್ತು ಪಾರ್ವತಿ ಅತಿಥಿಗಳನ್ನು ಪರಿಚಯಿಸಿದರು. ದಿವ್ಯಾ ಮತ್ತು ತಂಡದವರು ಪ್ರಾರ್ಥನೆಯನ್ನು ನೆರವೇರಿಸಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಹೆಚ್.ಪಿ. ನಿರ್ಮಾಲಾ ವಂದಿಸಿದರು.

ಗೋಣಿಕೊಪ್ಪ ವರದಿ: ತಾ. 5 ರಂದು ಕಾಪ್ಸ್ ಸಂಸ್ಥೆಯಲ್ಲಿ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸಂದರ್ಭ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸನ್ಮಾನಿತರು: ನಿವೃತ್ತ ಶಿಕ್ಷಕರಾದ ವಿ.ಕೆ. ತಿಮ್ಮಯ್ಯ, ಸಿ.ಎಂ. ಬೋಪಣ್ಣ, ಡಿ. ಫ್ರಾನ್ಸೀನಾ, ಹೆಚ್.ಕೆ. ಭಾಸ್ಕರ, ಪಿ.ಬಿ. ಜಾನಕಿ, ಸಿ.ಎ. ಲಿಲ್ಲಿ, ಕನ್ನು, ಸುನಂದಾ, ಮಾರ್ಗರೇಟ್ ಲಸ್ರಾದೊ, ವಿಜಯಕುಮಾರ್, ಚಂದ್ರಹಾಸ್ ಭಟ್, ಕೋಚಮಂಡ ಮಾದಪ್ಪ ಅಪ್ಪಣ್ಣ, ಪ್ರತಿಮಾ, ಟಿ.ವಿ. ಗಂಗಮ್ಮ, ಸಿ.ಎಂ. ಪಾರ್ವತಿ, ಎ.ಪಿ. ಸಾವಿತ್ರಿ, ಫಿಲೋಮಿನಾ, ಕೆ.ಬಿ. ಕಾವೇರಮ್ಮ, ಎಂ.ಪಿ. ಕಾಮಾಕ್ಷಿ, ಕೆ.ಎ. ಮುದ್ದಮ್ಮ, ಪ್ರತಿಮಾ, ಟಿ.ವಿ. ಗಂಗಮ್ಮ, ಸಿ.ಎಂ. ಪಾರ್ವತಿ, ಎ.ಪಿ. ಸಾವಿತ್ರಿ, ಶಿಕ್ಷಣ ಇಲಾಖೆ ಗುಮಾಸ್ತರಾದ ವಿಲ್ಫೆಡ್ ಗೊನ್ಸಾಲ್ವೇಸ್, ಜೇಮ್ಸ್‍ಪೌಲ್ ಲೋಬೋ, ಅಣ್ಣಯ್ಯಚಾರ್ ಅವರುಗಳನ್ನು ಸನ್ಮಾನಿಸಲಾಯಿತು.

2018-19 ಸಾಲಿನ ಎಸೆಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಸನ್ಮಾನ ಸ್ವೀಕರಿಸಿದರು. ಎಸೆಸೆಲ್ಸಿಯಲ್ಲಿ ತಾಲೂಕು ಮಟ್ಟದಲ್ಲಿ ಹೆಚ್ಚು ಅಂಕ ಪಡೆದ ಶಿಕ್ಷಕರ ಮಕ್ಕಳಾದ ರಾಜ್ಯಭಾಷೆ ವಿದ್ಯಾರ್ಥಿಗಳಾದ ಪ್ರಾರ್ಥನಾ ಉತ್ತಪ್ಪ, ಪ್ರಿಯಾ ನಾಗರಾಜ್, ವಿ.ಆರ್. ಚರಿಷ್ಮಾ, ಸಿಬಿಎಸ್‍ಇ ವಿಭಾಗದ ವಿದ್ಯಾರ್ಥಿಗಳಾದ ಎಸ್.ಪಿ. ಧನುಶ್, ವೈ.ಹೆಚ್. ನಿತೀಶ್, ಬಿ.ಕೆ. ಗಂಗಮ್ಮ, ಐಸಿಎಸ್‍ಇ ವಿಭಾಗದ ವಿದ್ಯಾರ್ಥಿಗಳಾದ ಕಿರಣ್ ಸತೀಶ್, ಬಿಷನ್ ಬೋಪಯ್ಯ ಅವರುಗಳು ಸನ್ಮಾನ ಸ್ವೀಕರಿಸಿದರು.

ಎಸೆಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಾದ ಪಿ.ಎ. ಅಯೆಷಾ, ಪಿ.ಎ. ಮೊಹಮ್ಮದ್ ಆಶಿರ್, ಬಿ. ಅರ್ಜುನ್, ಅನುದಾನಿತಾ ಪ್ರೌಢ ವಿಭಾಗದ ವಿ.ಪಿ. ಮಾನ್ವಿತಾ, ಡೆನ್ಸಿಲ್ ಉಜ್ವಲ್ ಆಳ್ವಾರಿಸ್, ರಕ್ಷಾ ಆರ್. ನಾಯಕ್, ಅನುದಾನ ರಹಿತ ವಿಭಾಗದಲ್ಲಿ ಜಾಗೃತಿ ಸುಬ್ಬಯ್ಯ, ಕೆ.ಎ. ಅನನ್ಯ, ಪ್ರಹರ್ಶಿತ್, ಕೆ.ಪಿ ಅನನ್ಯ ಅಕ್ಕಮ್ಮ ಅವರನ್ನು ಸನ್ಮಾನಿಸಲಾಯಿತು.

ಎಸೆಸೆಲ್ಸಿಯಲ್ಲಿ ಶೇ. 100 ಫಲಿತಾಂಶ ಪಡೆದ ಸರ್ಕಾರಿ ಶಾಲೆಗಳಾದ ಟಿ. ಶೆಟ್ಟಿಗೇರಿ, ಕೊಂಡಂಗೇರಿ, ಅನುದಾನಿತ ರಹಿತ ಶಾಲೆಗಳಾದ ಶ್ರೀಮಂಗಲ ಜೆ.ಸಿ. ಪ್ರೌಢಶಾಲೆ, ವೀರಾಜಪೇಟೆ ತ್ರಿವೇಣಿ, ವೀರಾಜಪೇಟೆ ಕಾವೇರಿ ಶಾಲೆ, ವೀರಾಜಪೇಟೆ ಮೌಂಟ್‍ವ್ಯೂವ್, ಗೋಣಿಕೊಪ್ಪ ಸಂತ ಥೋಮಸ್, ಟಿ. ಶೆಟ್ಟಿಗೇರಿ ರೂಟ್ಸ್, ಪೊನ್ನಂಪೇಟೆ ಸಂತ ಅಂಥೋನಿ, ಅನುದಾನಿತ ಪ್ರೌಢಶಾಲೆಗಳಾದ ದೇವಣಗ�