ಪೆರಾಜೆ, ಸೆ. 8: ಮಡಿಕೇರಿ ತಾಲೂಕಿನ ಪೆರಾಜೆಯ ಕೊಳಿಕ್ಕಿಮಲೆ ಬೆಟ್ಟದಿಂದ ದೊಡ್ಡ ಬಂಡೆಗಳು ಉರುಳಿ ಬಿದ್ದಿರುವದು ಸ್ಥಳೀಯರ ಆತಂಕಕ್ಕೆ ಎಡೆಮಾಡಿದೆ. ಬಂಡೆ ಉರುಳುವಾಗ ದೊಡ್ಡ ಸದ್ದು ಕೇಳಿಬಂದಿದೆ. ಪೆರಾಜೆಯ ಕುಂಡಾಡು ಚಾಮಕಜೆಯಲ್ಲಿ ಈ ಘಟನೆ ನಡೆದಿದೆ. ಒಂದು ಬಂಡೆಕಲ್ಲು ನಾಗವೇಣಿ ಎಂಬವರ ಮನೆಯ ಬಳಿ ಬಿದ್ದಿದ್ದು, ಜನರಿಗೆ ಯಾವದೇ ತೊಂದರೆ ಉಂಟಾಗಲಿಲ್ಲ. ಇನ್ನೂ ಕೆಲವು ಬಂಡೆಗಳು ಮರಗಳ ನಡುವೆ ಸಿಲುಕಿಕೊಂಡಿದ್ದು ಎಚ್ಚರಿಕೆಯಿಂದ ಇರಲು ಸ್ಥಳೀಯರಿಗೆ ಸೂಚಿಸಲಾಗಿದೆ.- ಕಿರಣ್ ಕುಂಬಳಚೇರಿ