ಮಡಿಕೇರಿ, ಸೆ. 7: ಹೊಂಬೆಳಕು ಮಾಸಿಕ ತತ್ವ ಚಿಂತನಾ ಗೋಷ್ಠಿಯ 191ನೇ ಗೋಷ್ಠಿಯು ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜೇಂದ್ರ ಪ್ರಸಾದ ಭವನದಲ್ಲಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆಯಿತು.

‘ಮೂಡನಂಬಿಕೆ, ಸಾಮಾಜಿಕ ಜಾಗೃತಿ ಮತ್ತು ನಾವು’ ಎಂಬ ವಿಚಾರವಾಗಿ ಗೋಷ್ಠಿ ನಡೆಯಿತು. ಕಾರ್ಯಕ್ರಮವನ್ನು ಕೂಡ್ಲೂರು ಕಾವೇರಿ ಶಾಲೆಯ ಅಧ್ಯಕ್ಷ ಬಿ.ಎಸ್. ಸುಧೀಶ್ ಉದ್ಘಾಟಿಸಿದರು. ಮೂಡನಂಬಿಕೆಗಳೆಂದು ಕರೆಯಲ್ಪಡುವ ವಿಚಾರಗಳಿಗೆ ವೈಜ್ಞಾನಿಕ ಕಾರಣಗಳನ್ನು ನೀಡಿದರು. ಉಪನ್ಯಾಸಕರಾಗಿ ಸಮಾಜ ಸೇವಕಿ ಗೀತಾ ಗಿರೀಶ್ ಆಗಮಿಸಿದ್ದರು.