ಚೆಟ್ಟಳ್ಳಿ, ಸೆ. 7: ಸೋಮವಾರಪೇಟೆ ರೆಂಜ್ ಸುನ್ನಿ ಬಾಲ ಸಂಘ (ಎಸ್.ಬಿ.ಎಸ್) ಇದರ ನೂತನ ಅಧ್ಯಕ್ಷರಾಗಿ ಮುನೀಝ್ ಕಾಗಡಿಕಟ್ಟೆ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಸುಫೈಲ್ ಬೋಯಿಕೇರಿ, ಕೋಶಾಧಿಕಾರಿ ಝೈನುಲ್ ಆಬಿದ್ ಕಲ್ಕಂದೂರು, ಉಪಾಧ್ಯಕ್ಷರಾಗಿ ರೋಶನ್ ಸುಂಟಿಕೊಪ್ಪ, ಶುರೈಫ್ ಹೊಸತೋಟ, ಸಹ ಕಾರ್ಯದರ್ಶಿಯಾಗಳಾಗಿ ಹಬೀಬುಲ್ ಬಶರ್, ಜುನೈದ್ ಸೋಮವಾರಪೇಟೆ ಹಾಗೂ 11 ಮಂದಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ನೂತನ ಸಮಿತಿ ರಚನೆ ಹಾಗೂ ವಿದ್ಯಾರ್ಥಿಗಳಿಗಿರುವ ತರಬೇತಿ ಶಿಬಿರವು ಗರಗಂದೂರು ನೂರುಲ್ ಇಸ್ಲಾಂ ಮದರಸದಲ್ಲಿ ಹಂಸ ರಹ್ಮಾನಿ ಕಂಡಕರೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಎಸ್.ಎಸ್.ಎಫ್ ಜಿಲ್ಲಾಧ್ಯಕ್ಷ ಅಝೀಜ್ ಸಖಾಫಿ ಕಾರ್ಯಕ್ರಮ ಉದ್ಘಾಟಸಿದರು.

ಸೋಮವಾರಪೇಟೆ ರೇಂಜ್ ಸಮಿತಿಗೆ ಒಳಪಡುವ 18 ಮದರಸಗಳ ವಿದ್ಯಾರ್ಥಿಗಳ ನ್ನೊಳಗೊಂಡ ಸಮಿತಿ ರಚನೆಯೂ ರೇಂಜ್ ಕಾರ್ಯದರ್ಶಿ ಹಸೈನಾರ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ನಡೆಯಿತು. ನೌಶಾದ್ ಅಶ್ರಫಿ ವಯನಾಡ್ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಿದರು. ಈ ಸಂದರ್ಭ ಸಿದ್ದೀಖ್ ಫಾಲಿಲಿ ಇದ್ದರು.