ವೀರಾಜಪೇಟೆ, ಸೆ. 6: ಮಡಿಕೇರಿಯ ಕೋಟೆ ಹಾಗೂ ಅರಮನೆಯನ್ನು ಸರಕಾರ ಇನ್ನೂ ಪ್ರಾಚ್ಯ ವಸ್ತು ಸಂಶೋಧನಾ ಕೇಂದ್ರಕ್ಕೆ ಹಸ್ತಾಂತರಿಸದೆ ವಿಳಂಬ ನೀತಿ ಅನುಸರಿಸುತ್ತಿರುವದರಿಂದ ಶಿಥಿಲಗೊಂಡಿರುವ ಕಟ್ಟಡಗಳನ್ನು ಮಳೆಯಿಂದ ರಕ್ಷಿಸುವಂತೆ ತಕ್ಷಣ ಕ್ರಮ ವಹಿಸುವಂತೆ ರಾಜ್ಯದ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠ ಇಂದು ಆದೇಶಿಸಿದೆ.ನಿವೃತ್ತ ಐ.ಎ.ಎಸ್. ಅಧಿಕಾರಿ ವಿರೂಪಾಕ್ಷಯ್ಯ ಸಲ್ಲಿಸಿದ ರಿಟ್ ಅರ್ಜಿ ಇಂದು ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠದ ಮುಂದೆ ಬಂದಿದ್ದು ವಿಚಾರಣೆ ನಡೆಸಿದ ನ್ಯಾಂiÀiಮೂರ್ತಿಗಳು ಕೋಟೆಯಲ್ಲಿರುವ ಕಟ್ಟಡಗಳನ್ನು ಮಳೆಯಿಂದ ರಕ್ಷಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದರು. ಇದೇ ಸಂದರ್ಭ ದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿ ಕೋಟೆಯಲ್ಲಿದ್ದ ಎರಡು ಇಲಾಖೆಗಳ ಕಚೇರಿಗಳನ್ನು ಸ್ಥಳಾಂತರಿಸಲಾಗಿದ್ದು, ಉಳಿದಿರುವ ಕಚೇರಿಗಳನ್ನು ಸಧ್ಯದಲ್ಲಿಯೇ ಸ್ಥಳಾಂತರಿಸಿ ಮಡಿಕೇರಿ ಕೋಟೆ ಹಾಗೂ ಅರಮನೆಯನ್ನು ರಕ್ಷಿಸಿ ಪ್ರಾಚ್ಯ ವಸ್ತು ಸಂಶೋಧನಾ ಕೇಂದ್ರಕ್ಕೆ ಹಸ್ತಾಂತರಿಸಲಾಗುವದು ಎಂದು ಲಿಖಿತವಾಗಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.ವಿರೂಪಾಕ್ಷಯ್ಯ ಅವರು ಈಗಿನ ಕೊಡಗಿನ ಭಾರೀ ಮಳೆಗೆ ಮಡಿಕೇರಿಯ ಅರಮನೆ ಹಾಗೂ ಕೋಟೆ ಕಟ್ಟಡಗಳು ಕುಸಿಯುವ
(ಮೊದಲ ಪುಟದಿಂದ) ಸ್ಥಿತಿಯಲ್ಲಿದೆ ಹಾಗೂ ಇದನ್ನು ಈ ತನಕ ಸರಕಾರ ಪ್ರಾಚ್ಯ ವಸ್ತು ಸಂಶೋಧನಾ ಕೇಂದ್ರಕ್ಕೆ ಹಸ್ತಾಂತರಿಸಿಲ್ಲ, ಈ ಕಟ್ಟಡಗಳನ್ನು ರಕ್ಷಿಸುವಂತೆ ಸರಕಾರಕ್ಕೆ ಆದೇಶಿಸಬೇಕು ಎಂದು ವಿಭಾಗೀಯ ಪೀಠಕ್ಕೆ ದೂರು ನೀಡಿದ್ದರು.
ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠದ ನ್ಯಾಯ ಮೂರ್ತಿಗಳಾದ ಎ.ಎಸ್.ಗೋಕಾಕ್ ಹಾಗೂ ಮಹಮ್ಮದ್ ನವಾಜ್ ಈ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರಾದ ವಿರೂಪಾಕ್ಷಯ್ಯ ಅವರ ಪರ ಎನ್. ರವೀಂದ್ರನಾಥ್ ಕಾಮತ್ ವಾದಿಸಿದರು.