ಶ್ರೀಮಂಗಲ, ಸೆ. 5: ರೈತರೋವರ್Àರು ಪೆÇನ್ನಂಪೇಟೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ) ಬ್ಯಾಂಕಿನಲ್ಲಿ ಇರಿಸಿದ್ದ ನಿರಖು ಠೇವಣಿ ಹಣ ಅವಧಿ ವಿಕಸನಗೊಂಡರೂ ಅದನ್ನು ಮರುಪಾವತಿಸದೆ ಸಾಲದ ಖಾತೆಗೆ ವಜಾ ಮಾಡಲು ಮುಂದಾಗಿರುವ ಬ್ಯಾಂಕಿನ ಕ್ರಮ ವಿರೋಧಿಸಿ ತಾ. 9ರಂದು ಬ್ಯಾಂಕ್ ಎದುರು ಜಂಟಿಯಾಗಿ ಬೃಹತ್ ಪ್ರತಿಭಟನೆ ನಡೆಸಲು ಕೊಡಗು ಬೆಳೆಗಾರರ ಒಕ್ಕೂಟ, ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ, ಜಿಲ್ಲಾ ರೈತ ಸಂಘ - ಹಸಿರು ಸೇನೆ ಹಾಗೂ ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ ಸಂಘಟನೆಗಳು ನಿರ್ಧಾರ ಮಾಡಿವೆ.
ಶ್ರೀಮಂಗಲ ಪ್ರವಾಸಿ ಮಂದಿರದಲ್ಲಿ ಈ ಸಂಘಟನೆಯ ಪ್ರಮುಖರು ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದಾರೆ. ಈಗಾಗಲೇ ಪೆÇನ್ನಂಪೇಟೆಯ ಎಸ್.ಬಿ.ಐ. ಬ್ಯಾಂಕ್ ವ್ಯವಸ್ಥಾಪಕರಿಗೆ ಸಂಬಂಧಿಸಿದ ನಿರಖು ಠೇವಣಿಯನ್ನು ಮರುಪಾವತಿಸುವಂತೆ ಕೇಳಿ ಗಡುವು ನೀಡಿದ್ದರೂ ಅದಕ್ಕೆ ಸ್ಪಂದಿಸದ ಹಿನ್ನೆಲೆಯಲ್ಲಿ ಪ್ರತಿಭಟನೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಕರಣದ ವಿವರ: ಶ್ರೀಮಂಗಲ ಸಮೀಪ ಕುರ್ಚಿ ಗ್ರಾಮದ ರೈತ ಎ.ಬಿ. ನಾಚಪ್ಪ ಅವರು ಹಲವು ವರ್ಷದಿಂದ ಎಸ್.ಬಿ.ಐ ಬ್ಯಾಂಕಿನಲ್ಲಿ ಇರಿಸುತ್ತ ಬಂದಿದ್ದ ನಿರಖು ಠೇವಣಿ ಮೊತ್ತ ರೂ. 6.17 ಲಕ್ಷ ಹಣವನ್ನು 2017ರಲ್ಲಿ ಮತ್ತೆ ಒಂದು ವರ್ಷದ ಅವಧಿಗೆ ಮುಂದುವರೆಸಿದ್ದರು. 2018ರ ಡಿಸೆಂಬರ್‍ಗೆ ಈ ಹಣ (ರೂ. 6.70 ಲಕ್ಷ) ಅವಧಿ ಮುಗಿದು ವಿಕಸನಗೊಂಡಿದ್ದು, ತನ್ನಷ್ಟಕ್ಕೆ ಅದನ್ನು ನವೀಕರಣ ಮಾಡಿ ಮುಂದಿನ ವರ್ಷಕ್ಕೆ ಮುಂದುವರೆಸುವ ಆಯ್ಕೆ ಹೊಂದಿ ದ್ದರೂ ಈ ಹಣ ನವೀಕರಣವನ್ನು ಬ್ಯಾಂಕ್ ಮಾಡಿರುವದಿಲ್ಲ.
ಫಲಾನುಭವಿ ಎ.ಬಿ. ನಾಚಪ್ಪ ಅವರು ತಮ್ಮ ಅನಾರೋಗ್ಯದ ಕಾರಣ ನಿರಖು ಠೇವಣಿಯನ್ನು ಮರುಪಾವತಿ ಸಲು ಕೇಳಿದಾಗ ಆ ಹಣವನ್ನು ನೀಡಲು ಬ್ಯಾಂಕ್ ಅಧಿಕಾರಿಗಳು ನಿರಾಕರಿಸಿರುವದು ಬೆಳಕಿಗೆ ಬಂದಿದೆ. ನಾಚಪ್ಪ ಅವರಿಗೆ ಬ್ಯಾಂಕಿನಲ್ಲಿ ಸಾಲವಿದ್ದು, ಆ ಸಾಲಕ್ಕೆ ಎಫ್.ಡಿ ಹಣವನ್ನು ಹೊಂದಿಸಿ ಕೊಳ್ಳಲಾಗಿದೆ, ಈ ಹಣವನ್ನು ಮರುಪಾವತಿಸಲು ಸಾಧ್ಯವಿಲ್ಲ ಎಂದು ಬ್ಯಾಂಕ್ ವ್ಯವಸ್ಥಾಪಕರು ಹೇಳಿರುವದರಿಂದ ಈ ಪ್ರಕರಣದಿಂದ ರೈತನಿಗೆ ಅನ್ಯಾಯವಾ ಗಿದ್ದು, ಈ ಮೊತ್ತವನ್ನು ಸಂಪೂರ್ಣ ವಾಗಿ ಮರುಪಾವತಿಸುವಂತೆ ಒತ್ತಾಯಿಸಿ ಹೋರಾಟ ನಡೆಸಲು ಸಂಘಟನೆಗಳು ಮುಂದಾಗಿವೆ.
ಸಂಘಟನೆಗಳಿಂದ ಅಸಮಾಧಾನ: ಕೊಡಗು ಜಿಲ್ಲೆ ಕಳೆದ ಎರಡು ವರ್ಷದಿಂದ ಕಂಡು ಕೇಳರಿಯದಂತಹ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿದೆ. ಕಳೆದ ಎರಡು ದಶಕದಿಂದಲೂ ಜಿಲ್ಲೆಯ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಹವಾಮಾನ ವೈಪರೀತ್ಯ ಮತ್ತು ಉತ್ಪಾದನಾ ವೆಚ್ಚ ಹೆಚ್ಚಳದಿಂದ ರೈತ - ಬೆಳೆಗಾರರ ಸಮುದಾಯ ತೀವ್ರ ಸಂಕಷ್ಟದಲ್ಲಿದೆ. ಇದರಿಂದ ಜಿಲ್ಲೆಯ ಬೆಳೆಗಾರ ಸಂಘಟನೆಗಳು ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತಿದ್ದು, ಇಂತಹ ಪ್ರಯತ್ನ ಪ್ರಗತಿಯಲ್ಲಿರುವಾಗಲೇ ಎಸ್.ಬಿ.ಐ ಶಾಖೆ ಬಲತ್ಕಾರದಿಂದ ಸಾಲ ವಸೂಲಾತಿ ಮಾಡುತ್ತಿರುವದು ಸರಿಯಲ್ಲ. ಅದರಲ್ಲೂ ರೈತ ತನ್ನ ಅನಾರೋಗ್ಯ ಮತ್ತು ಕುಟುಂಬದ ಭದ್ರತೆಗಾಗಿ ಇರಿಸಿರುವ ಎಫ್.ಡಿ. ಹಣವನ್ನು ಫಲಾನುಭವಿಯ ಗಮನಕ್ಕೆ ತಾರದೆ ಏಕಾಏಕಿ ಸಾಲದ ಖಾತೆಗೆ ಹಿಡಿದಿರುವದು ಬ್ಯಾಂಕ್ ಮೇಲೆ ಗ್ರಾಹಕರು ಇರಿಸಿರುವ ವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡಿದೆ ಎಂದು ಕಿಡಿಕಾರಿದ್ದಾರೆ.
ಸಾಲ ಪಡೆಯಲು ಕಾಫಿ ತೋಟದ ದಾಖಲೆಗಳನ್ನು ಆಧಾರವಾಗಿ ಬ್ಯಾಂಕಿಗೆ ನೀಡಿರುವಾಗ ಎಫ್.ಡಿ ಹಣವನ್ನು ಮರುಪಾವತಿಸಲು ನಿರಾಕರಿಸುತ್ತಿರುವ ಬ್ಯಾಂಕಿನ ಕ್ರಮ ಸರಿಯಲ್ಲ. ಇದರ ವಿರುದ್ಧ ಎಲ್ಲ ಬೆಳೆಗಾರರು ಹಾಗೂ ರೈತರನ್ನು ಸಂಘಟಿಸಿ ಹೋರಾಟ ನಡೆಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆಯಲ್ಲಿ ರೈತ ಎ.ಬಿ. ನಾಚಪ್ಪ, ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ, ಜಿಲ್ಲಾ ರೈತ ಸಂಘ - ಹಸಿರು ಸೇನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಕೊಡಗು ಬೆಳೆಗಾರರ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಖಜಾಂಚಿ ಮಾಣೀರ ವಿಜಯ್ ನಂಜಪ್ಪ, ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾಣೀರ ಮುತ್ತಪ್ಪ, ಶ್ರೀಮಂಗಲ ಹೋಬಳಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ ಹಾಜರಿದ್ದರು.