ಮಡಿಕೇರಿ, ಸೆ. 4: ವೀರಾಜಪೇಟೆ ಶ್ರೀ ಗೌರಿಗಣೇಶ ಉತ್ಸವ ಸಮಿತಿ ವತಿಯಿಂದ ಗಣೇಶೋತ್ಸವದ ಪ್ರಯುಕ್ತ ತಾ. 5 ರಂದು (ಇಂದು) ಕಂಡ್ರತಂಡ ಶರಿ ತಿಮ್ಮಯ್ಯ ಉಲ್ಲಾಸ್ ಶೇಟ್ ಮತ್ತು ಕುಟುಂಬಸ್ಥರಿಂದ ಪೂಜೆ ನಡೆಯಲಿದೆ. ಸಭಾ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೃದ್ರೋಗ ತಜ್ಞ ಡಾ. ಎಂ.ಸಿ. ಕರುಣ್ ಕಾರ್ಯಪ್ಪ ವಹಿಸುವರು. ಅಡ್ಡಂಡ ಕಾರ್ಯಪ್ಪ ಮತ್ತು ಅನಿತಾ ಕಾರ್ಯಪ್ಪ ಅವರ ರಂಗಭೂಮಿ ಕಲಾ ಪ್ರತಿಷ್ಠಾನದಿಂದ ‘ಬದುಕ್’ ಕೊಡವ ನಾಟಕ ಪ್ರದರ್ಶನಗೊಳ್ಳಲಿದೆ.