ಸಿದ್ದಾಪುರ, ಸೆ. 5: ವೀರಾಜಪೇಟೆ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಾದ ಹೊಸಕೋಟೆ, ಕಳತ್ಮಾಡು, ಹೊಸೂರು, ನಲ್ವತ್ತೊಕ್ಲು, ಬಿಳಗುಂದ, ಕೈಕೇರಿ, ಹಾತೂರು, ಬೆಟ್ಟಗೆರಿ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡಾನೆಗಳನ್ನು ಮರಳಿ ಕಾಡಿಗೆ ಓಡಿಸುವ ಕಾರ್ಯಕ್ರಮವನ್ನು ತಾ. 6 ರಂದು (ಇಂದು) ಹಮ್ಮಿಕೊಂಡಿದ್ದು ಸಾರ್ವಜನಿಕರು ಕಾಫಿ ತೊಟದ ಮಾಲೀಕರು ಕೆಲಸಗಾರರು ಶಾಲಾ ಮಕ್ಕಳು ಎಚ್ಚರಿಕೆ ವಹಿಸಬೇಕೆಂದು ವಲಯ ಅರಣ್ಯಾಧಿಕಾರಿ ಕೆ.ಪಿ. ಗೋಪಾಲ್ ಸಲಹೆ ನೀಡಿದ್ದಾರೆ.