ಶನಿವಾರಸಂತೆ, ಸೆ. 5: ಕೊಡ್ಲಿಪೇಟೆ ಹೋಬಳಿಯ ಬೆಂಬಳೂರು ಗ್ರಾಮದ ಜೋಳದ ಗದ್ದೆಯಲ್ಲಿ ಕಾಡು ಹಂದಿಗೆ ಉರುಳು ಹಾಕಿ ಬೇಟೆಯಾಡಿದ ಮೂವರನ್ನು ಅರಣ್ಯ ಇಲಾಖೆ ಬಂಧಿಸಿದೆ.
ಬೆಂಬಳೂರು ಗ್ರಾಮದ ಆರೋಪಿ ಬಿ.ಕೆ. ವಸಂತ ಅವರ ಜೋಳದ ಗದ್ದೆಯಲ್ಲಿ ಕಾಡು ಹಂದಿಗಾಗಿ ಉರುಳು ಹಾಕಿದ್ದು, ಆರೋಪಿಗಳಾದ ಬಿ.ಕೆ. ವಸಂತ, ಕೆಂಚಮ್ಮನ ಹೊಸಕೋಟೆ ಹೋಬಳಿಯ ಅರಳಿ ಗ್ರಾಮದ ಹೆಚ್.ಎನ್. ಯತೀಶ್, ಈತನ ಸಹೋದರ ಹೆಚ್.ಎನ್. ಸಂತೋಷ್ ಇವರುಗಳನ್ನು ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ವಾಹನದ ಮಾಲೀಕ ಅರಳಿ ಗ್ರಾಮದ ಹೆಚ್.ಆರ್. ಅವಿನಾಶ್ ಪರಾರಿಯಾಗಿದ್ದಾನೆ.