ಕುಶಾಲನಗರ, ಸೆ. 4: ಡಿ.ಕೆ. ಶಿವಕುಮಾರ್ ಬಂಧನ ಕ್ರಮವನ್ನು ಪ್ರತಿಭಟಿಸಲು ತಯಾರಿ ನಡೆಸಿದ ಸಂದರ್ಭ ಕಾಂಗ್ರೆಸ್ ಮುಖಂಡರನ್ನು ನಿಂದಿಸಿ ಹಲ್ಲೆ ನಡೆಸಿದ ಬಿಜೆಪಿ ವರ್ತನೆಯನ್ನು ಖಂಡಿಸಿ ತಾ. 5 ರಂದು (ಇಂದು) ಸಂಜೆ 4 ಗಂಟೆಗೆ ಕಾಂಗ್ರೆಸ್ ಪಕ್ಷದಿಂದ ಕುಶಾಲನಗರದಲ್ಲಿ ಪ್ರತಿಭಟನಾ ಮೆರವಣಿಗೆ ಮತ್ತು ಸಾಂಕೇತಿಕ ರಸ್ತೆ ತಡೆ ನಡೆಸುವದು ಮತ್ತು ನಾಡ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ತಿಳಿಸಿದ್ದಾರೆ.