ಮಡಿಕೇರಿ, ಸೆ. 4: ಭಾರತೀಯ ವಾಯುಸೇನೆಯಲ್ಲಿ ಸ್ಕ್ವಾಡ್ರನ್‍ಲೀಡರ್ ಹುದ್ದೆಯನ್ನು ಅಲಂಕರಿಸಿ ತನ್ನ ಜೀವದಹಂಗುತೊರೆದು ಶತ್ರುಗಳೊಂದಿಗೆ ಹೋರಾಡಿ ಕೀರ್ತಿಮೇರೆದು ವೀರ ಮರಣನವನಪ್ಪಿದ ಧೀರ ಸೇನಾನಿ sಸ್ಕ್ವಾಡ್ರನ್‍ಲೀಡರ್ ಅಜ್ಜಮಾಡ ಬಿ. ದೇವಯ್ಯ ಅವರ ಸ್ಮರಣಾ ದಿನವನ್ನು ತಾ. 7 ರಂದು ಮಡಿಕೇರಿಯ ಸ್ಕ್ವಾಡ್ರನ್‍ಲೀಡರ್ ಅಜ್ಜಮಾಡ ಬಿ. ದೇವಯ್ಯ ವೃತ್ತದಲ್ಲಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಗುವದೆಂದು ಕೂಟದ ಪ್ರಧಾನ ಕಾರ್ಯದರ್ಶಿ ಪುತ್ತರಿರ ಕರುಣ್‍ಕಾಳಯ್ಯ ತಿಳಿಸಿದ್ದಾರೆ.

ಪೂರ್ವಾಹ್ನ 10 ಗಂಟೆಗೆ ಅಜ್ಜಮಾಡ ದೇವಯ್ಯ ವೃತ್ತದಲ್ಲಿ ಸ್ಮರಣೆ ಕಾರ್ಯಕ್ರಮ ನಡೆಯಲಿದ್ದು, ಏರ್ ಮಾರ್ಷಲ್ ಕೊಡಂದೇರ ಕಾರ್ಯಪ್ಪ, ಶಾಸಕ ಮಂಡೆಪಂಡ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರುಗಳಾದ ಮಂಡೆಪಂಡ ಸುನಿಲ್‍ಸುಬ್ರಮಣಿ, ಶಾಂತೆಯಂಡ ವೀಣಾ ಅಚ್ಚಯ್ಯ, ಮಾಜಿ ಸಚಿವರಾದ ಮೇರಿಯಂಡ ಸಿ. ನಾಣಯ್ಯ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಯಯ್ಯ ಫೋರಂನ ಅಧ್ಯಕ್ಷ ಕಂಡ್ರತಂಡ ಸುಬ್ಬಯ್ಯ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಟ್ರಸ್ಟ್‍ನ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ, ಅಜ್ಜಮಾಡ ಕುಟುಂಬದ ಅಧ್ಯಕ್ಷ ಅಜ್ಜಮಾಡ ಲವ ಕರುಂಬಯ್ಯ, ಪ್ರಧಾನ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ ಸೇರಿದಂತೆ ಗಣ್ಯರು, ಕೊಡವ ಮಕ್ಕಡ ಕೂಟದ ಪದಾಧಿಕಾರಿಗಳು ಸದಸ್ಯರು, ಅಜ್ಜಮಾಡ ಕುಟುಂಬಸ್ಥರು, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಯಯ್ಯ ಫೋರಂನ ಸದಸ್ಯರುಗಳು, ನಿವೃತ್ತ ಯೋಧರು, ಯೋಧಾಭಿಮಾನಿಗಳು ಭಾಗವಹಿಸುವರೆಂದು ತಿಳಿಸಿದ್ದಾರೆ.