ಶನಿವಾರಸಂತೆ, ಸೆ. 5: ನಿಡ್ತ ಪಂಚಾಯಿತಿ ವ್ಯಾಪ್ತಿಯ ಮುಳ್ಳೂರು ಗ್ರಾಮದಲ್ಲಿ ಮುಳ್ಳೂರಿನ ಲೀಲಾವತಿ ಚಂದ್ರಶೇಖರ್ ಎಂಬವರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಮುಳ್ಳೂರು ಗ್ರಾಮದ ಸಂತೋಷ್, ಸತೀಶ್, ಗ್ರಿತೀನ್, ದಿನೇಶ್ ಹಾಗೂ ದರ್ಶನ್ ಎಂಬವರುಗಳ ಮೇಲೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.