ಮಡಿಕೇರಿ, ಸೆ. 5: ವಿಘ್ನ ನಿವಾರಕ, ಆದಿಪೂಜಿತ ಗಣಪತಿಯ ಆರಾಧನೆ ಪ್ರಸಕ್ತ ವರ್ಷ ಸೆಪ್ಟೆಂಬರ್ ಎರಡರ ಚೌತಿಯ ದಿನದಿಂದ ಆರಂಭಗೊಂಡಿದ್ದು, ಜಿಲ್ಲೆಯಾದ್ಯಂತ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಪೂಜೆ- ಪುನಸ್ಕಾರಗಳು ಜರುಗುತ್ತಿವೆ. ಮಳೆ - ಚಳಿಯ ನಡುವೆಯೂ ಭಕ್ತರು ವಿಘ್ನೇಶ್ವರ ಆರಾಧನೆ- ವಿಸರ್ಜನೋತ್ಸವಗಳಲ್ಲಿ ಸಂಭ್ರಮದಿಂದ ಭಾಗಿಗಳಾಗುತ್ತಿದ್ದಾರೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಒಟ್ಟು 441 ಕಡೆಗಳಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಸೆ.5ರಂದು 14 ಮೂರ್ತಿಗಳ ವಿಸರ್ಜನೋತ್ಸವ ಜರುಗಿದ್ದು, ಈತನಕ 214, ಇನ್ನು 227 ಮೂರ್ತಿಗಳು ವಿಸರ್ಜನೆಗೆ ಬಾಕಿ ಉಳಿದಿವೆ.