ಕುಶಾಲನಗರ, ಸೆ. 3: ಕುಶಾಲನಗರದ ಕೆಎಚ್‍ಬಿ ಕಾಲೋನಿಯಲ್ಲಿ ಡೆಂಗ್ಯೂ ಜ್ವರದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಕಾಲೋನಿಯ ನಿವಾಸಿ ಪಾರ್ವತಿ (44) ಕಳೆದ ಕೆಲವು ದಿನಗಳಿಂದ ಜ್ವರ ಪೀಡಿತ ರಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತರು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಪುತ್ರನಿಗೆ ಕೂಡ ಡೆಂಗ್ಯೂ ಪೀಡಿತರಾಗಿದ್ದು ಕಾಲೋನಿಯ ಹಲವು ನಿವಾಸಿಗಳು ಡೆಂಗ್ಯೂ ಖಾಯಿಲೆಗೆ ಒಳಗಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.