ಸೋಮವಾರಪೇಟೆ, ಸೆ. 3: ಮೇಯುತ್ತಿದ್ದ ಜಾನುವಾರಿನ ಮೇಲೆ ವಿದ್ಯುತ್ ತಂತಿ ಬಿದ್ದ ಪರಿಣಾಮ, ಜಾನುವಾರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ನಗರಳ್ಳಿ ಗ್ರಾಮದಲ್ಲಿ ನಡೆದಿದೆ. ನಗರಳ್ಳಿ ಗ್ರಾಮದ ಬಿ.ಡಿ. ಹಾಲಪ್ಪ ಎಂಬವರಿಗೆ ಸೇರಿದ ಜಾನುವಾರನ್ನು ಮೇಯಲು ಬಿಡಲಾಗಿತ್ತು. ನಗರಳ್ಳಿ ಶಾಲೆಯ ಪಕ್ಕದ ಲ್ಲಿಯೇ ಇರುವ ಟ್ರಾನ್ಸ್ಫಾರ್ಮರ್ ನಿಂದ ಹಾದು ಹೋಗಿದ್ದ ವಿದ್ಯುತ್ ತಂತಿ ತುಂಡಾಗಿ ರಸ್ತೆಯ ಬದಿಯಲ್ಲಿ ಬಿದ್ದ ಪರಿಣಾಮ, ಕೆಳಭಾಗದಲ್ಲಿ ಮೇಯುತ್ತಿದ್ದ ಜಾನುವಾರು ಅಸುನೀಗಿದೆ. ತಕ್ಷಣ ವಿದ್ಯುತ್ ಇಲಾಖೆಗೆ ಮಾಹಿತಿ ನೀಡಿದ ಮೇರೆ, ವಿದ್ಯುತ್ ಸಂಪರ್ಕ ವನ್ನು ಸ್ಥಗಿತಗೊಳಿಸಲಾಯಿತು. ಒಂದು ವೇಳೆ ಎಚ್ಚರಿಕೆ ತಪ್ಪಿದ್ದರೆ ಮಾನವ ಜೀವಹಾನಿಯೂ ಸಂಭವಿಸು ತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.