ಮಡಿಕೇರಿ, ಆ. 31: ಮಂಗಳೂರು ವಿಶ್ವವಿದ್ಯಾನಿಲಯದ ಕಾನೂನು ಪದವಿಯ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಕಾನೂನು ಪದವಿಯ ಪರೀಕ್ಷೆಗಳನ್ನು 2019-20ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಅಂತಿಮವಾಗಿ ನಡೆಸಲಿದ್ದು, ಪರೀಕ್ಷೆ ಬರೆಯಲು ಬಾಕಿಯಿರುವ ಪುನರಾವರ್ತಿತ ವಿದ್ಯಾರ್ಥಿಗಳು ಅಕ್ಟೋಬರ್ 2019-ಏಪ್ರಿಲ್ 2020 ತಿಂಗಳಲ್ಲಿ ನಡೆಯಲಿರುವ ಪರೀಕ್ಷೆಗೆ ಆಯಾಯ ಕಾಲೇಜುಗಳಲ್ಲಿ ನೋಂದಣಿ ಮಾಡುವಂತೆ ತಿಳಿಸಲಾಗಿದೆ. ಏಪ್ರಿಲ್ 2020ರಲ್ಲಿ ನಡೆಸುವ ಪರೀಕ್ಷೆಗೆ ಹಾಜರಾಗಲು ಕೊನೆಯ ಅವಕಾಶವಾಗಿದ್ದು, ಮುಂದಕ್ಕೆ ಪುನರಾವರ್ತಿತ ವಿದ್ಯಾರ್ಥಿಗಳಿಗಾಗಿ ಯಾವದೇ ವಿಷಯಕ್ಕೆ ಸಂಬಂಧಿಸಿ ಕಾನೂನು ಪದವಿ ಪರೀಕ್ಷೆಗಳನ್ನು ನಡೆಸಲಾಗುವದಿಲ್ಲ ಎಂದು ವಿ.ವಿ. ಪ್ರಕಟಣೆ ತಿಳಿಸಿದೆ.