ಮಡಿಕೇರಿ, ಆ. 30: ಲೋಕಮಾನ್ಯ ಬಾಲಗಂಗಾಧರ ತಿಲಕರ ಆಶಯದಂತೆ ಅಂದು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ತಿರುವು ನೀಡಿದ್ದ ಸಾರ್ವಜನಿಕ ಗಣೇಶೋತ್ಸವವು ಇಂದು ಭಾರತ ಮಾತ್ರವಲ್ಲದೆ, ವಿಶ್ವದೆಲ್ಲೆಡೆ ವಿಭಿನ್ನ ರೀತಿಯಲ್ಲಿ ಆಚರಣೆಗೊಳ್ಳುತ್ತಿದೆ. ನಮ್ಮ ಕೊಡಗಿನಂಥ ಪುಟ್ಟ ಜಿಲ್ಲೆಯಲ್ಲಿಯೂ, ಕಾವೇರಿ ನಾಡಿನ ಉದ್ದಗಲಕ್ಕೂ ಪ್ರಸಕ್ತ ವರ್ಷದಲ್ಲಿ ನಾಲ್ಕು ನೂರಕ್ಕೂ ಅಧಿಕ ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವಗಳು ನಡೆಯುವಂತಾಗಿದೆ.

ಈ ವರ್ಷ ‘ಪರಿಸರ ಸ್ನೇಹಿ’ ಎಂಬ ವಿಶೇಷತೆಯೊಂದಿಗೆ ಶ್ರೀ ಗೌರಿ - ಗಣೇಶೋತ್ಸವ ಆಚರಣೆಗೊಳ್ಳುತ್ತಿರುವದು ಗಮನಾರ್ಹ; ಆ ಪ್ರಕಾರ ‘ಶಕ್ತಿ’ಗೆ ನಾಡಿನ ಉದ್ದಗಲಕ್ಕೂ ಪ್ರಸಕ್ತ ವರ್ಷದಲ್ಲಿ ನಾಲ್ಕು ನೂರಕ್ಕೂ ಅಧಿಕ ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವಗಳು ನಡೆಯುವಂತಾಗಿದೆ.

ಈ ವರ್ಷ ‘ಪರಿಸರ ಸ್ನೇಹಿ’ ಎಂಬ ವಿಶೇಷತೆಯೊಂದಿಗೆ ಶ್ರೀ ಗೌರಿ - ಗಣೇಶೋತ್ಸವ ಆಚರಣೆಗೊಳ್ಳುತ್ತಿರುವದು ಗಮನಾರ್ಹ; ಆ ಪ್ರಕಾರ ‘ಶಕ್ತಿ’ಗೆ ಮಾರಾಟಕ್ಕೆ ಲಭಿಸುತ್ತಿವೆ. ‘ಪ್ಲಾಸ್ಟಿಕ್ ಪ್ಯಾರೀಸ್’ನಂತಹ ಪ್ಲಾಸ್ಟಿಕ್ ಹಾಗೂ ಕೆಮಿಕಲ್ ಇತ್ಯಾದಿ ಬಣ್ಣದಿಂದ ತಯಾರಿಸುವ ಮೂರ್ತಿಗಳು ಮಾರಾಟಕ್ಕೂ ಲಭಿಸುತ್ತಿಲ್ಲ; ಅಂಥ ಮೂರ್ತಿಗಳಿಗೆ ಎಲ್ಲೆಡೆ ನಿರ್ಬಂಧವಿದ್ದು, ಜೇಡಿ ಮಣ್ಣು, ಕಾಗದ, ತೈಲ ವರ್ಣದಿಂದ ರೂಪಿಸಿರುವ ಪರಿಸರ ಸ್ನೇಹಿ ಮೂರ್ತಿಗಳಿಗೆ ಮಾತ್ರ ಮಾರುಕಟ್ಟೆ ಕಲ್ಪಿಸಲಾಗಿದೆ. ಅಂಥ ಮೂರ್ತಿಗಳನ್ನು ಖರೀದಿಸಿ ಜಿಲ್ಲೆಯ ಗ್ರಾಹಕರಿಗೆ ಒದಗಿಸಲಾಗುತ್ತಿದೆ.

ಬೇಡಿಕೆ ಇದೆ : ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಸಾರ್ವಜನಿಕ ಹಾಗೂ ಮನೆಗಳಲ್ಲಿ ಪೂಜಿಸುವ ಗಣಪತಿ ಉತ್ಸವ ಹೆಚ್ಚುತ್ತಲೇ ಇದ್ದು, ಉತ್ಸವ ಮೂರ್ತಿಗಳೀಗೆ ಬೇಡಿಕೆಯೂ ಇದೆ.

(ಮೊದಲ ಪುಟದಿಂದ) ಪ್ರಸಕ್ತ ಕೊಡಗಿನಲ್ಲಿ ಮಳೆ-ಪ್ರವಾಹದಂಥ ಸನ್ನಿವೇಶದ ನಡುವೆಯೂ ಎಂದಿನಂತೆ ಗಣೇಶೋತ್ಸವಗಳ ಸಿದ್ಧತೆ ಗೋಚರಿಸತೊಡಗಿದೆ. ಈಗಿನ ಆರ್ಥಿಕ ಸನ್ನಿವೇಶ ಹಾಗೂ ಪ್ರಾಕೃತಿಕ ವಿಕೋಪದಿಂದ ಖಾಸಗಿಯಾಗಿ (ಮನೆಗಳಲ್ಲಿ) ಪ್ರತ್ಯೇಕ ಪೂಜೆಗಳು ಸ್ವಲ್ಪ ಮಟ್ಟಿಗೆ ಇಳಿಮುಖವಿರುವದಾಗಿ ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲಲ್ಲಿ ಆಚರಣೆ : ಸಾರ್ವಜನಿಕ ಉತ್ಸವಗಳಿಗೆ ಸರಕಾರ ಹಾಗೂ ಪೊಲೀಸ್ ಮತ್ತಿತರ ಇಲಾಖೆಗಳು ವಿಧಿಸಿರುವ ಅನೇಕ ರೀತಿಯ ಕಾನೂನಿನ ನಿರ್ಬಂಧಗಳ ನಡುವೆಯೂ ನಾಡಿನೆಲ್ಲೆಡೆ ಆಚರಣೆಗೆ ತಯಾರಿ ಮುಂದುವರಿದಿವೆ. ಕಾನೂನು ಸುವ್ಯವಸ್ಥೆಯೊಂದಿಗೆ ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಸಾರ್ವಜನಿಕ ವಲಯದಿಂದ ಉತ್ತಮ ಸ್ಪಂದನ ಲಭಿಸಿರುವದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ‘ಶಕ್ತಿ’ಯೊಂದಿಗೆ ಅಭಿಪ್ರಾಯಪಟ್ಟಿದ್ದಾರೆ.

ವೀರಾಜಪೇಟೆ ತಾಲೂಕು : ವೀರಾಜಪೇಟೆ ತಾಲೂಕು ಕೇಂದ್ರದಲ್ಲಿ ಪ್ರತಿವರ್ಷದಂತೆ 20 ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವಗಳು ಅದ್ಧೂರಿ ಆಚರಣೆಯೊಂದಿಗೆ ಇತರ 8 ಕಾರ್ಯಕ್ರಮಗಳಿಗೆ ತಯಾರಿ ನಡೆದಿದೆ. ಗ್ರಾಮಾಂತರ ಪ್ರದೇಶಗಳ ಅಲ್ಲಲ್ಲಿ 23 ಉತ್ಸವಗಳೊಂದಿಗೆ ಕುಟ್ಟ ವ್ಯಾಪ್ತಿಯಲ್ಲಿ 3 ಕಡೆ, ಶ್ರೀಮಂಗಲ ಸುತ್ತಮುತ್ತ 7 ಕಡೆ, ಪೊನ್ನಂಪೇಟೆ ವ್ಯಾಪ್ತಿ 20, ಗೋಣಿಕೊಪ್ಪಲು, ತಿತಿಮತಿ ಮುಂದಾದೆಡೆ 18 ಉತ್ಸವಗಳಿಗೆ ತಯಾರಿ ಸಾಗಿದೆ. ಇನ್ನು ಸಿದ್ದಾಪುರ ಸುತ್ತಮುತ್ತ 18 ಕಡೆ ಸಾರ್ವಜನಿಕ ಗಣೇಶೋತ್ಸವ ಜರುಗಲಿದೆ.

ಸೋಮವಾರಪೇಟೆ ತಾಲೂಕು : ಉತ್ತರ ಕೊಡಗಿನ ಗಡಿ ಗ್ರಾಮಗಳ ಸಹಿತ ಸೋಮವಾರಪೇಟೆ ತಾಲೂಕಿನೆಲ್ಲೆಡೆ 134 ಕಡೆಗಳಲ್ಲಿ ತಯಾರಿ ಕಂಡುಬಂದಿದೆ. ತಾಲೂಕು ಕೇಂದ್ರವು ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ಒಟ್ಟು 49 ಕಡೆಗಳಲ್ಲಿ ಹಾಗೂ ಶನಿವಾರಸಂತೆ, ಕೊಡ್ಲಿಪೇಟೆ ಮತ್ತಿತರ ಕಡೆಗಳಲ್ಲಿ 44 ಸಾರ್ವಜನಿಕ ಉತ್ಸವಗಳಿಗೆ ಸಿದ್ಧತೆ ಮುಂದುವರಿದಿದೆ. ಇನ್ನು ಕುಶಾಲನಗರ ವ್ಯಾಪ್ತಿಯಲ್ಲಿ 16 ಕಡೆ ಹಾಗೂ ಸುಂಟಿಕೊಪ್ಪ ಮತ್ತಿತರ ಗ್ರಾಮೀಣ ಪ್ರದೇಶಗಳನ್ನು ಒಳಗೊಂಡು 25 ಉತ್ಸವಗಳು ಜರುಗಲಿದೆ.

ಜಿಲ್ಲಾ ಕೇಂದ್ರ - ಮಡಿಕೇರಿ ತಾಲೂಕು : ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ಶ್ರೀ ಕೋಟೆ ಗಣಪತಿ, ವಿಜಯ ವಿನಾಯಕ, ದೃಷ್ಠಿ ಗಣಪತಿ, ಪ್ರಸನ್ನ ಗಣಪತಿ ದೇವಾಲಯಗಳು ಸೇರಿದಂತೆ ಅನೇಕ ಕಡೆ ವಿಶೇಷ ಪೂಜೆ, ಹೋಮ ಹವನಗಳು ಚೌತಿಯ ಪ್ರಯುಕ್ತ ಜರುಗಲಿದೆ. ಅಲ್ಲದೆ ನಗರದ ವಿವಿಧೆಡೆಗಳಲ್ಲಿ 29ಕ್ಕೂ ಹೆಚ್ಚಿನ ಉತ್ಸವಗಳಿಗೆ ಸಿದ್ಧತೆ ನಡೆದಿದೆ. ಗ್ರಾಮಾಂತರ ತಾಲೂಕಿನ ಅಲ್ಲಲ್ಲಿ 80 ಸಾರ್ವಜನಿಕ ಉತ್ಸವಗಳು ಏರ್ಪಾಡುಗೊಳ್ಳಲಿವೆ ಎಂದು ಮಾಹಿತಿ ಲಭಿಸಿದೆ.

ಮಾತ್ರವಲ್ಲದೆ ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರಗಳಲ್ಲಿ ವಿಶೇಷ ಪೂಜೆಯೊಂದಿಗೆ, ಇತರೆಡೆಗಳಲ್ಲಿ 16 ಸಾರ್ವಜನಿಕ ಉತ್ಸವಗಳು ಜರುಗಲಿದ್ದು, ನಾಪೋಕ್ಲು ಮತ್ತಿತರ ಕಡೆಗಳಲ್ಲಿ 17 ಗಣೇಶೋತ್ಸವಗಳ ಆಚರಣೆಗೆ ಸಿದ್ಧತೆ ಏರ್ಪಟ್ಟಿದೆ. ಒಟ್ಟಿನಲ್ಲಿ ವಿಘ್ನ ವಿನಾಯಕನ ಪೂಜೆಗೆ ಭಕ್ತ ಜನತೆ ಎಲ್ಲ ಸಂಕಷ್ಟಗಳ ನಡುವೆಯೂ ಮುಂದಾಗಿದ್ದು, ಆ ಮುಖಾಂತರ ಸರ್ವರ ಕಲ್ಯಾಣಕ್ಕಾಗಿ ಭಗವಂತನಲ್ಲಿ ಮೊರೆಯಿಡಲು ಕಾತರಗೊಂಡಿದ್ದಾರೆ ಎನ್ನುವದು ವಾಸ್ತವ. - ಶ್ರೀಸುತ