ಸೋಮವಾರಪೇಟೆ,ಆ.30: ಇಲ್ಲಿನ ಸರ್ಕಾರಿ ಕಾಲೇಜು ಆವರಣದಲ್ಲಿ ರಾತ್ರಿ 8 ಗಂಟೆಯಲ್ಲಿ ಅಡ್ಡಾಡುತ್ತಿದ್ದ ಮಧ್ಯವಯಸ್ಕ ಪ್ರೇಮಿಗಳಿಗೆ ಪೊಲೀಸರು ‘ಒಳ್ಳೇ ಬುದ್ಧಿಯ ಪಾಠ’ ಹೇಳಿ ಕಳುಹಿಸಿಕೊಟ್ಟ ಘಟನೆ ನಡೆದಿದೆ.
ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಮಧ್ಯ ವಯಸ್ಸಿನ ಪುರುಷ ಮತ್ತು ಮಹಿಳೆ, ಕಾಲೇಜಿನ ಆವರಣದಲ್ಲಿರುವ ವೇದಿಕೆಯ ಬಳಿ ಮೈ ಮರೆಯುತ್ತಿದ್ದ ಸಂದರ್ಭ ಪೊಲೀಸರು ಆಗಮಿಸಿ ಇಬ್ಬರಿಗೂ ಪಾಠ ಹೇಳಿ ಕಳುಹಿಸಿಕೊಟ್ಟಿದ್ದಾರೆ.
ಪಟ್ಟಣದ ಹೊರವಲಯದ ಪುರುಷ ಮತ್ತು ಮಹಿಳೆ ರಾತ್ರಿ ವೇಳೆ ಇಲ್ಲಿ ಕಾಣಿಸಿಕೊಂಡಿದ್ದು, ಮೊದಲು ಸತಿ-ಪತಿಗಳೆಂದು ಕಥೆ ಕಟ್ಟಿದ್ದಾರೆ. ಸ್ಥಳೀಯರನ್ನು ವಿಚಾರಿಸಿದ ಸಂದರ್ಭ ಇಬ್ಬರೂ ಬೇರೆ ಬೇರೆ ಎಂಬದು ಮನವರಿಕೆಯಾಗಿದ್ದು, ವಿಚಾರವನ್ನು ಬಹಿರಂಗಪಡಿಸದೇ ಇಬ್ಬರಿಗೂ ಬುದ್ಧಿಮಾತು ಹೇಳಿ ಬೀಳ್ಕೊಡಲಾಗಿದೆ.
ರಾತ್ರಿಯಾಗುತ್ತಲೇ ಜೂನಿಯರ್ ಕಾಲೇಜು ಆವರಣದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು, ಇಲ್ಲಿ ಗಾಂಜಾ ವ್ಯಸನಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ರಾತ್ರಿ ವೇಳೆಯಲ್ಲಿ ಜೂನಿಯರ್ ಕಾಲೇಜು ವ್ಯಾಪ್ತಿಯಲ್ಲಿ ಪೊಲೀಸ್ ಗಸ್ತು ಮಾಡಬೇಕೆಂದು ಒತ್ತಾಯಿಸಿದ್ದಾರೆ.