ಮಡಿಕೇರಿ, ಆ. 30: ಗೋಣಿಕೊಪ್ಪ ಕಾವೇರಿ ಎಜುಕೇಶನ್ ಸೊಸೈಟಿ, ಸುವರ್ಣ ಕಾವೇರಿ ಸಾಂತ್ವನ ಯೋಜನೆ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯೆನೆಪೊಯ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ, ತಾ. 31 ರಂದು (ಇಂದು) 10 ಗಂಟೆಗೆ ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ಕ್ಯಾನ್ಸರ್ ಅರಿವು ಜಾಗೃತಿ ಕಾರ್ಯಕ್ರಮ ಮತ್ತು ಮೂಲಭೂತ ಜೀವನ ಆಧಾರ ಮತ್ತು ಪ್ರಥಮ ಚಿಕಿತ್ಸೆ ತರಬೇತಿ ಶಿಬಿರ ನಡೆಯಲಿದೆ.
ಕಾವೇರಿ ವಿದ್ಯಾಸಂಸ್ಥೆ ಅಧ್ಯಕ್ಷ ಡಾ. ಎ.ಸಿ. ಗಣಪತಿ, ರಾಜ್ಯ ಎನ್‍ಎಸ್‍ಎಸ್ ಅಧಿಕಾರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಾಜಿ ಜಂಟಿ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಯೆಕ್ಕಾರ್, ರಾಜ್ಯ ಎನ್‍ಎಸ್‍ಎಸ್ ಅನುಷ್ಠಾನ ಅಧಿಕಾರಿ, ಡಾ. ಪೂರ್ಣಿಮ ಜೋಗಿ, ಕಾರ್ಯಕ್ರಮ ಸಂಯೋಜಕಿ ಡಾ. ಅಶ್ವಿನಿ ಎಸ್. ಶೆಟ್ಟಿ ಇತರರು ಪಾಲ್ಗೊಳ್ಳಲಿದ್ದಾರೆ.