ವೀರಾಜಪೇಟೆ, ಆ. 28: ಇಲ್ಲಿಗೆ ಸಮೀಪದ ಬಿ.ಸಿ. ಪ್ರೌಢಶಾಲೆ, ದೇವಣಗೇರಿಯಲ್ಲಿ ಪ್ರಥಮ ಬಾರಿಗೆ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಮುಕ್ಕಾಟೀರ ಸುನಿಲ್ ನಾಣಯ್ಯ ಕ್ರೀಡಾಜ್ಯೋತಿ ಬೆಳಗಿಸಿದರು.
ಮುಖ್ಯ ಅತಿಥಿಗಳಾಗಿ ಶಾಲಾ ಆಡಳಿತ ಮಂಡಳಿಯ ಕಾರ್ಯನಿರ್ವಾಹಕಿ ಕರ್ನಂಡ ಎನ್. ಬೊಳ್ಳಮ್ಮ, ಪಿ.ಎ. ಲಕ್ಷ್ಮೀನಾರಾಯಣ, ಮುಖ್ಯ ಶಿಕ್ಷಕ ಹೆಚ್.ಡಿ. ಲೋಕೇಶ್, ಸುನೀತ, ಸಹ ಶಿಕ್ಷಕಿ ವೈ. ಪ್ರಮೀಳಾಕುಮಾರಿ ಹಾಜರಿದ್ದರು.