ಗೋಣಿಕೊಪ್ಪಲು, ಆ. 28: ಪೆÇನ್ನಂಪೇಟೆ ಕೊಡವ ಸಮಾಜದ ಅಪ್ಪಚ್ಚಕವಿ ವಿದ್ಯಾಲಯ ಆಶ್ರಯದಲ್ಲಿ ಜರುಗಿದ ತಾಲೂಕುಮಟ್ಟದ ದಿ. ಕಾಕಮಾಡ ಎನ್. ನಾಣಯ್ಯ ಸ್ಮಾರಕ ಚರ್ಚಾ ಸ್ಪರ್ಧೆಯಲ್ಲಿ ಗೋಣಿ ಕೊಪ್ಪಲು ಲಯನ್ಸ್ ಶಾಲೆಯು ಮೂರು ಪ್ರಥಮ, ಕಾಲ್ಸ್ ಶಾಲೆ ಮತ್ತು ಅತಿಥೇಯ ಅಪ್ಪಚ್ಚ ಕವಿ ವಿದ್ಯಾಲಯ ತಲಾ ಒಂದು ಪ್ರಥಮ ಸ್ಥಾನ ಗಳಿಸುವ ಮೂಲಕ ಸಾಧನೆ ಮಾಡಿವೆ.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಆಶಾ ಗಣೇಶ್ ಅಧ್ಯಕ್ಷತೆಯಲ್ಲಿ, ಮಾಜಿ ಆಡಳಿತ ಮಂಡಳಿ ಅಧ್ಯಕ್ಷ ಪೆÇನ್ನಿಮಾಡ ಸುರೇಶ್ ಅವರು ಉದ್ಘಾಟನೆ ನೆರವೇರಿಸಿ ಚರ್ಚಾ ಸ್ಪರ್ಧೆಗೆ ಚಾಲನೆ ನೀಡಿದರು.
ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದಲ್ಲಿ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಪೆÇನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಲಯದ ಸಿ.ವಿ. ಶ್ರೇಯಾ (ಪ್ರಥಮ), ಲಯನ್ಸ್ ಪ್ರೌಢಶಾಲೆಯ ಪುಣ್ಯಪೂವಮ್ಮ (ದ್ವಿತೀಯ) ಹಾಗೂ ಅಪ್ಪಚ್ಚಕವಿ ವಿದ್ಯಾಲಯದ ಮನಿಷಾ ಲಕ್ಷ್ಮಿ (ತೃತೀಯ) ಬಹುಮಾನ ಗೆದ್ದುಕೊಂಡರು.
ಪ್ರೌಢಶಾಲಾ ಮಟ್ಟದ ಆಂಗ್ಲ ಚರ್ಚಾ ಸ್ಪರ್ಧೆಯಲ್ಲಿ ಲಯನ್ಸ್ ಪ್ರೌಢಶಾಲೆಯ ಲಾಸ್ಯ ಕಾವೇರಮ್ಮ ಹಾಗೂ ಕಾಲ್ಸ್ ಪ್ರೌಢಶಾಲೆಯ ಮೋಕ್ಷಾ ದೇಚಮ್ಮ ಜಂಟಿಯಾಗಿ ಪ್ರಥಮ ಸ್ಥಾನ ಗೆದ್ದುಕೊಂಡರು. ಅಪ್ಪಚ್ಚಕವಿ ಪ್ರೌಢಶಾಲೆಯ ವರುಣ್ ಉತ್ತಯ್ಯ (ದ್ವಿತೀಯ) ಹಾಗೂ ಲಯನ್ಸ್ ಪ್ರೌಢಶಾಲೆಯ ಸನಾ ಟಿ.ಎಸ್. (ತೃತೀಯ) ಬಹುಮಾನ ಗೆದ್ದುಕೊಂಡಿದ್ದಾರೆ. 5 ರಿಂದ 7ನೇ ತರಗತಿವರೆಗಿನ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಲಯನ್ಸ್ ಪ್ರಾಥಮಿಕ ಶಾಲೆಯ ಕೆ.ಜೆ. ದೇಚಮ್ಮ (ಪ್ರಥಮ), ಅರುವತ್ತೊಕ್ಕಲು ಸರ್ವದೈವತಾ ಪ್ರಾಥಮಿಕ ಶಾಲೆಯ ಸಿ.ಸಿ. ಭೀಮಯ್ಯ (ದ್ವಿತೀಯ) ಹಾಗೂ ಅಪ್ಪಚ್ಚಕವಿ ವಿದ್ಯಾಲಯದ ಟಿ. ವಿಪಿನ್ ತೃತೀಯ ಬಹುಮಾನ ಗಳಿಸಿದರು.
ಆಂಗ್ಲ ಭಾಷಾ ಚರ್ಚಾ ಸ್ಪರ್ಧೆಯಲ್ಲಿ ಲಯನ್ಸ್ ಪ್ರಾಥಮಿಕ ಶಾಲೆಯ ಬಿ.ಪಿ. ರಕ್ಷಾ (ಪ್ರಥಮ), ಅಪ್ಪಚ್ಚ ಕವಿ ಶಾಲೆಯ ಅಶ್ಮೀನಾ ಕೆ.ಎಲ್. (ದ್ವಿತೀಯ) ಹಾಗೂ ಅಪ್ಪಚ್ಚ ಕವಿ ವಿದ್ಯಾಲಯದ ಮಾಫಿದಾ ತೃತೀಯ ಬಹುಮಾನ ಗೆದ್ದು ಸಾಧನೆ ಮಾಡಿದರು. ವಿಜೇತರು ಹಾಗೂ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ಪೆÇನ್ನಂಪೇಟೆ ಕರ್ನಾಟಕ ಪಬ್ಲಿಕ್ ಸರ್ಕಾರಿ ಶಾಲೆಯ ಕೃತಿಶಾ ಹಾಗೂ ಲೀನಾ ಅವರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.
ಆದರ್ಶ ಪುರುಷರ ಸ್ಮರಣೆ ಅಗತ್ಯ
ಇಂದಿನ ಯುವ ಪೀಳಿಗೆಗೆ ಸ್ವಾತಂತ್ರ್ಯ ಸಂಗ್ರಾಮದ ಮಹತ್ವ ತಿಳಿದಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬರಲು ಶ್ರಮಿಸಿದ ದೇಶ ಭಕ್ತರ ಆದರ್ಶ ಪುರುಷರ ಬಗ್ಗೆ ಮನವರಿಕೆ ಮಾಡುವ ಸಲುವಾಗಿ ಚರ್ಚಾ ಸ್ಪರ್ಧೆಯಲ್ಲಿ ಮಹಾತ್ಮಾ ಗಾಂಧಿ ಇನ್ನಿತರ ದೇಶಭಕ್ತರ ಕುರಿತು ವಿಷಯವನ್ನು ಅಳವಡಿಸ ಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ, ಪೆÇನ್ನಂಪೇಟೆ ಕೊಡವ ಸಮಾಜದ ಪೆÇನ್ನಿಮಾಡ ಸುರೇಶ್ ಸಮಾರೋಪದಲ್ಲಿ ಅಭಿಪ್ರಾಯಪಟ್ಟರು. ಶಾಲಾ ಅಡಳಿತ ಮಂಡಳಿ ಅಧ್ಯಕ್ಷೆ ಆಶಾ ಗಣೇಶ್ ಮಾತನಾಡಿ, ಚರ್ಚಾ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆಯ ತಾಂತ್ರಿಕ ಕೌಶಲ್ಯ ಕಲಿತುಕೊಳ್ಳಲು, ಮೊಬೈಲ್ ಇತ್ಯಾದಿ ಬಳಕೆಯಿಂದ ಮಾನವನ ಮೇಲಾಗುವ ದುಷ್ಪರಿಣಾಮ ಕುರಿತು ಬೆಳಕು ಚೆಲ್ಲಲು, ವಿದ್ಯಾರ್ಥಿಗಳಲ್ಲಿನ ಬೌದ್ಧಿಕ ಜ್ಞಾನ ಹೆಚ್ಚಿಸಲು ಇಂತಹಾ ಸ್ಪರ್ಧೆಗಳು ಎಲ್ಲೆಡೆಯೂ ನಡೆಯುವಂತಾಗಲಿ ಎಂದು ಹೇಳಿದರು.
ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಮಂಡಚಂಡ ದಿನೇಶ್ ಚಿಟ್ಟಿಯಪ್ಪ, ಕಾರ್ಯದರ್ಶಿ ಮೂಕಳಮಾಡ ಅರಸು ನಂಜಪ್ಪ, ಮುಖ್ಯ ಶಿಕ್ಷಕಿ ತನುಜಾ ಎಸ್.ಎಸ್. ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಪೆÇನ್ನಂಪೇಟೆ ಸುದೇವಿ ಪಿ.ಯು. ಕಾಲೇಜಿನ ಪ್ರಾಂಶುಪಾಲೆ ಜ್ಯೋತಿ, ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಉಪನ್ಯಾಸಕರಾದ ಎಸ್.ಎಂ. ರಜನಿ, ಎಂ.ಎಸ್. ಭಾರತಿ ಹಾಗೂ ಗೋಣಿಕೊಪ್ಪಲು ಪತ್ರಕರ್ತ ಟಿ.ಎಲ್. ಶ್ರೀನಿವಾಸ್ ಕಾರ್ಯನಿರ್ವಹಿಸಿದರು. ಕಾವೇರಮ್ಮ ಎಂ.ಎನ್., ಸ್ಮಿತಾ ಎಂ.ಎಂ ಹಾಗೂ ಲೀನಾ ಟಿ.ಆರ್. ನಿರೂಪಿಸಿದರು.