ಮಡಿಕೇರಿ, ಆ. 28: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವಕ್ಕೆ ಸಂಬಂಧಿಸಿದಂತೆ ಸಮಿತಿಯ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಅಂತಿಮವಾಗಿ ಇಬ್ಬರು ಸ್ಪರ್ಧಾ ಕಣದಲ್ಲಿದ್ದಾರೆ.ನಿನ್ನೆ ದಿನ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ 12 ಮಂದಿ ಆಕಾಂಕ್ಷಿಗಳಿದ್ದರೂ, ಈ ಪೈಕಿ 8 ಮಂದಿ ಹಿಂದೆ ಸರಿದಿದ್ದರು. ಅನಿತಾ ಪೂವಯ್ಯ, ರಾಬಿನ್ ದೇವಯ್ಯ, ಪಿ.ಜಿ. ಮಂಜುನಾಥ್, ಡೀನ್ ಬೋಪಣ್ಣ ಇವರುಗಳು ಸ್ಪರ್ಧಾ ಕಣದಲ್ಲಿದ್ದ ಕಾರಣ ಇಂದು ಸಂಜೆಯವರೆಗೆ ಮಾತುಕತೆ ಮೂಲಕ ಒಮ್ಮತದ ತೀರ್ಮಾನಕ್ಕೆ ಅವಕಾಶ ನೀಡಲಾಗಿತ್ತು.ಅದರಂತೆ ಅನಿತಾ ಪೂವಯ್ಯ ಹಾಗೂ ಡೀನ್ ಬೋಪಣ್ಣ ಸ್ಪರ್ಧಾ ಕಣದಿಂದ ಹಿಂದೆ ಸರಿದಿದ್ದು, ಈ ಕುರಿತು ದಶಮಂಟಪ ಸಮಿತಿ ಅಧ್ಯಕ್ಷ ರಂಜಿತ್ ಕುಮಾರ್‍ಗೆ ಲಿಖಿತ ಪತ್ರ ನೀಡಿದ್ದಾರೆ.

ಆದರೆ ರಾಬಿನ್ ದೇವಯ್ಯ ಹಾಗೂ ಪಿ.ಜಿ. ಮಂಜುನಾಥ್ ಸ್ಪರ್ಧಾ ಕಣದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ಸಭೆಯಲ್ಲಿ ತೀರ್ಮಾನಿಸಿದಂತೆ ತಾ. 29ರಂದು (ಇಂದು) ಮಧ್ಯಾಹ್ನ 3.30 ಗಂಟೆಗೆ ಕಾವೇರಿ ಕಲಾಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ.