ಕುಶಾಲನಗರ, ಆ. 28: ಕುಶಾಲನಗರ ಬಿ ವಲಯ ಮಟ್ಟದ ಪ್ರೌಢಶಾಲಾ ಬಾಲಕ-ಬಾಲಕಿಯರ 2019-20ನೇ ಸಾಲಿನ ಕ್ರೀಡಾಕೂಟ ಸ್ಥಳೀಯ ಬಾಲಕಿಯರ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಶಾಲನಗರ ಪಪಂ ಸದಸ್ಯ ಜಯವರ್ಧನ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿ.ಪಿ. ನಾಗೇಶ್ ಕ್ರೀಡಾಜ್ಯೋತಿ ಬೆಳಗಿಸಿದರು. ಭಾರತೀಯ ಸ್ಟೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಸೂದನ ರತ್ನಾವತಿ ಪೂಣಚ್ಚ ಪಂದ್ಯಾಟಕ್ಕೆ ಚಾಲನೆ ನೀಡಿದರು. ಕ್ರೀಡಾಕೂಟದಲ್ಲಿ ವಲಯ ಮಟ್ಟದ 12 ಶಾಲೆಗಳ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ವಾಲಿಬಾಲ್, ಥ್ರೋಬಾಲ್ ಮೊದಲಾದ ಪಂದ್ಯಾಟಗಳು ಜರುಗಿದವು. ಶಾಲಾ ಮುಖ್ಯ ಶಿಕ್ಷಕಿ ಪುಷ್ಪ, ಜಿಲ್ಲಾ ಶಿಕ್ಷಕರ ಸಂಘದ ಖಜಾಂಚಿ ದಯಾನಂದ ಪ್ರಕಾಶ್, ತಾಲೂಕು ಶಿಕ್ಷಕರ ಸಂಘದ ಕಾರ್ಯದರ್ಶಿ ನಾಗರಾಜ್, ವಲಯ ಮಟ್ಟದ ಕಾರ್ಯದರ್ಶಿ ಲಕ್ಷ್ಮಣ್, ದೈಹಿಕ ಶಿಕ್ಷಕರುಗಳಾದ ಸುರೇಶ್, ಮಂಜುನಾಥ್, ಶಾಲೆಯ ಶಿಕ್ಷಕರಾದ ರಂಗಸ್ವಾಮಿ, ಮಾರ್ಗರೇಟ್ ಮತ್ತಿತರರು ಇದ್ದರು.