ಪಾಲಿಬೆಟ್ಟ, ಆ. 28: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪಾಲಿಬೆಟ್ಟದಲ್ಲಿ ರಾಜ್ಯ ಮಟ್ಟದ ಮುಕ್ತ ಕಾಲ್ಚೆಂಡು ಪಂದ್ಯಾಟವನ್ನು ಆಯೋಜಿಸಲಾಗಿತ್ತು. ಈ ಪಂದ್ಯಾಟದ ಅಂತಿಮ ಪಂದ್ಯಾಟವು ಅಮ್ಮತ್ತಿ ಮಿಲನ್ಸ್ ಮತ್ತು ಪಾಲಿಬೆಟ್ಟ ಸಹರಾ ಎಫ್.ಸಿ ನಡುವೆ ನಡೆಯಿತು. 2-1 ಗೋಲಿನಿಂದ, ಅಮ್ಮತ್ತಿ ಮಿಲನ್ಸ್ ತಂಡ ಜಯಬೇರಿ ಗಳಿಸಿತು. ಸುಮಾರು 30 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ತಾಲೂಕು ಪಂಚಾಯಿತಿ ಸದಸ್ಯರಾದ ಅಜಿತ್ ಕರುಂಬಯ್ಯ ಅವರು ಕ್ರಿಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭ ಕ್ಯಾಪ್ಟನ್ ಇಲವೆನ್ಸ್ ತಂಡದ ಅಧ್ಯಕ್ಷ ಟಿ.ಜಿ. ವಿಜೇಶ್, ಮಾಜಿ ಆಟಗಾರ ನವೀನ್ ಈಶ್ವರ್, ದೈಹಿಕ ಶಿಕ್ಷಕರಾದ ಮದನ್, ಕೆ.ಡಿ.ಸಿ.ಸಿ. ಬ್ಯಾಂಕಿನ ಮಧುಸೂದನ್ ಉಪಸ್ಥಿತರಿದ್ದರು. ವಿಜೇತ ಎರಡು ತಂಡಕ್ಕೆ ಮುಖ್ಯ ಅತಿಥಿಗಳಿಂದ ಬಹುಮಾನ ವಿತರಣೆ ಮಾಡಲಾಯಿತು. ಅತೀ ಹೆಚ್ಚು ಗೋಲು ಬಾರಿಸಿದ ರೋಜರ್ ತಂಡದ ಕಿಶೋರ್ ಅವರಿಗೆ ಬಹುಮಾನ ನೀಡಲಾಯಿತು.
-ಪುತ್ತಂ ಪ್ರದೀಪ್