ಮಡಿಕೇರಿ, ಆ. 28: ಕರ್ನಾಟಕ ಸ್ಪೋಟ್ರ್ಸ್- ಡ್ಯಾನ್ಸ್ ಎಸೋಸಿ ಯೇಶನ್ ವತಿಯಿಂದ ಇತ್ತೀಚೆಗೆ ಹುಣಸೂರಿನಲ್ಲಿ ಆಯೋಜಿ ಸಿದ್ದ ಮೈಸೂರು ವಲಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಅಮ್ಮತ್ತಿಯ ನಾಟ್ಯಾಂಜಲಿ ನೃತ್ಯ ಸಂಸ್ಥೆ ಚಾಂಪಿಯನ್ ಆಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.

ಸಂಸ್ಥೆಯ ತರಬೇತುದಾರರಾದ ಕಾವ್ಯಶ್ರೀ ಹಾಗೂ ಶ್ವೇತಾ ಇವರುಗಳೊಂದಿಗೆ ವಿದ್ಯಾರ್ಥಿಗಳಾದ ವೈಷ್ಣವಿ, ನಿಶಿ, ಸರಸ್ವತಿ ಪ್ರೇಕ್ಷಾ ಭಾರ್ಗವಿ, ಭೂಮಿಕಾ, ತನಿಷಾ, ಗ್ರೀಷ್ಮಾ ಮುಂತಾದವರು ಪಾಲ್ಗೊಂಡಿದ್ದರು. ಸಂಸ್ಥೆಗೆ ಸಮಗ್ರ ಚಾಂಪಿಯನ್‍ಶಿಪ್ ಟ್ರೋಫಿ ಮತ್ತು ಅತ್ಯುತ್ತಮ ನೃತ್ಯ ಸಂಯೋಜಕ ಟ್ರೋಫಿ ದೊರೆತಿದೆ ಎಂದು ಸಂಸ್ಥೆಯ ನಿರ್ದೇಶಕಿ ಹೇಮಾವತಿ ಕಾಂತರಾಜ್ ತಿಳಿಸಿದ್ದಾರೆ.