ಬಿರುನಾಣಿ, ಆ. 27: ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿದ ಲಯನ್ಸ್ ಸಂಸ್ಥೆ, ಗೋಣಿಕೊಪ್ಪ ಇವರ ಸಾರಥ್ಯದಲ್ಲಿ ನಡೆಯುತ್ತಿರುವ ಬಿರುನಾಣಿಯ ಸುಜ್ಯೋತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಸ್ಥಳೀಯ ಟಿ. ಶೆಟ್ಟಿಗೇರಿ ಜಿಎಂಪಿ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ ಕಾರ್ಯಕ್ರಮದ ಒಂದನೇ ತರಗತಿಯಿಂದ ನಾಲ್ಕನೇ ತರಗತಿ ವಿಭಾಗದ ಲಘು ಸಂಗೀತ ಸ್ಪರ್ಧೆಯಲ್ಲಿ ಎನ್.ಬಿ. ಬೋಜಮ್ಮ ಪ್ರಥಮ, ಹಿಂದಿ ಕಂಠಪಾಠ ಎನ್.ಕೆ. ಪ್ರಿನೀತ್ ಪ್ರಥಮ, ಬೋಜಮ್ಮ ಎನ್.ಬಿ. ಕನ್ನಡ ಕಂಠಪಾಠ ದ್ವಿತೀಯ, ಬಲ್‍ಬೀರ್ ಮೆಹರ್ ಇಂಗ್ಲೀಷ್ ಕಂಠಪಾಠ ತೃತೀಯ ಹಾಗೂ ಧಾರ್ಮಿಕ ಪಠಣದಲ್ಲಿ ದ್ವಿತೀಯ, ಎನ್.ಕೆ. ಪ್ರಿನೀತ್ ಭಕ್ತಿಗೀತೆಯಲ್ಲಿ ತೃತೀಯ, ಎನ್.ಎಸ್. ವರ್ಣಿಕ ಆಶುಭಾಷಣ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಒಂದರಿಂದ ನಾಲ್ಕನೇ ತರಗತಿಯ ಸಾಮೂಹಿಕ ವಿಭಾಗದ ರಸಪ್ರಶ್ನೆಯಲ್ಲಿ ಕೆ.ಎಂ. ಮುತ್ತಣ್ಣ ಮತ್ತು ತಂಡ ಪ್ರಥಮ, ಜಾನಪದ ನೃತ್ಯ ಎನ್.ಎಸ್. ವರ್ಣಿಕ ಮತ್ತು ತಂಡ ಪ್ರಥಮ, ದೇಶಭಕ್ತಿಗೀತೆಯಲ್ಲಿ ಎಂ.ಎಂ.ಪೂವಮ್ಮ ಮತ್ತು ತಂಡ ತೃತೀಯ ಸ್ಥಾನ, ಕೋಲಾಟದಲ್ಲಿ ಕೆ.ಡಿ. ಚಿಂತನ್ ಮತ್ತು ತಂಡ ತೃತೀಯ ಸ್ಥಾನ ಪಡೆದಿದ್ದಾರೆ.

ಐದರಿಂದ ಏಳನೇ ತರಗತಿ ವಿಭಾಗದಲ್ಲಿ ಕೆ.ಎನ್. ಗ್ರಂಥ ಗಂಗಮ್ಮ ಇಂಗ್ಲೀಷ್ ಕಂಠಪಾಠ ಹಾಗೂ ಭಕ್ತಿಗೀತೆಯಲ್ಲಿ ಪ್ರಥಮ, ಕೆ.ಆರ್. ಪ್ರೀತಲ್ ಪೊನ್ನಮ್ಮ ಲಘು ಸಂಗೀತ ಪ್ರಥಮ ಹಾಗೂ ಧಾರ್ಮಿಕ ಪಠಣ ದ್ವಿತೀಯ ಕೆ.ಎನ್. ಅನೂಪ್ ಅಯ್ಯಪ್ಪ ಅಭಿನಯಗೀತೆ ಪ್ರಥಮ, ಕೆ.ಎಂ. ಮೌರ್ಯ ಮುತ್ತಪ್ಪ ಹಿಂದಿ ಕಂಠಪಾಠ ತೃತೀಯ ಸ್ಥಾನ ಪಡೆದಿದ್ದಾರೆ.

ಸಾಮೂಹಿಕ ವಿಭಾಗದಲ್ಲಿ ಕೆ.ವಿ. ಧನ್ಯ ಮತ್ತು ತಂಡ ರಸಪ್ರಶ್ನೆಯಲ್ಲಿ ಪ್ರಥಮ, ಕೆ.ವಿ. ರಿಶಿತ ತಂಗಮ್ಮ ಮತ್ತು ತಂಡ ಕೋಲಾಟದಲ್ಲಿ ದ್ವಿತೀಯ, ಎಂ. ಕೌಶಲ್ಯ ಮತ್ತು ತಂಡ ದೇಶಭಕ್ತಿಗೀತೆಯಲ್ಲಿ ತೃತೀಯ, ಎ.ಎಸ್. ಖುಷಿ ಮುತ್ತಮ್ಮ ಮತ್ತು ತಂಡ ಜಾನಪದ ನೃತ್ಯದಲ್ಲಿ ತೃತೀಯ ಸ್ಥಾನ ಪಡೆದು ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.