ಮಡಿಕೇರಿ, ಆ. 27: ಮಡಿಕೇರಿ ಆಕಾಶವಾಣಿಯು 1993ರ ಆಗಸ್ಟ್ 28 ರಂದು 103.1 ಮೆಗಾ ಹರ್ಟ್ಸ್ ತರಂಗಾಂತರದಿಂದ ಸ್ಥಾಪನೆಯಾಗಿ ಇದೀಗ 26ನೇ ವರ್ಷವನ್ನು ಪೂರೈಸುತ್ತಿದೆ.
6 ಕಿಲೋ ವಾಟ್ಸ್ ಸಾಮಥ್ರ್ಯದಿಂದ ಶುರುವಾದ ಮಡಿಕೇರಿ ಆಕಾಶವಾಣಿಯು ಈಗ ತನ್ನ ಪ್ರಸಾರದ ಸಾಮಥ್ರ್ಯವನ್ನು 10 ಕಿಲೋ ವಾಟ್ಸ್ ಹೆಚ್ಚಿಸಿಕೊಂಡು ಪ್ರಸಾರದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಈ ಸಂದರ್ಭದಲ್ಲಿ ತಾ. 28 ರಂದು ಆಕಾಶವಾಣಿ -ನಮ್ಮೀವಾಣಿ ರೂಪಕವನ್ನು ಬೆಳಗ್ಗೆ 9.10 ಮಧ್ಯಾಹ್ನ 1.30 ಹಾಗೂ ಸಂಜೆ 5 ಗಂಟೆಗೆ ಪ್ರಸಾರ ಮಾಡಲಾಗುತ್ತಿದೆ ಎಂದು ಕಾರ್ಯಕ್ರಮ ನಿರ್ವಾಹಕರಾದ ಉಣ್ಣಿಕೃಷ್ಣನ್ ಮತ್ತು ವಿಜಯ್ ಅಂಗಡಿ ಅವರು ತಿಳಿಸಿದ್ದಾರೆ.