ಬೆಂಗಳೂರು, ಆ.26: ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಅಧಿಕೃತ ಖಾತೆ ಹಂಚಿಕೆ ಪಟ್ಟಿ ಬಿಡುಗಡೆ ಮಾಡಲಾಗಿದೆ. ಬಹಳ ಚರ್ಚೆ, ವಾದ-ವಿವಾದದ ನಂತರ ಖಾತೆ ಬೆಂಗಳೂರು, ಆ.26: ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಅಧಿಕೃತ ಖಾತೆ ಹಂಚಿಕೆ ಪಟ್ಟಿ ಬಿಡುಗಡೆ ಮಾಡಲಾಗಿದೆ. ಬಹಳ ಚರ್ಚೆ, ವಾದ-ವಿವಾದದ ನಂತರ ಖಾತೆ ಕಳೆದ ವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರಿಗೆ ಖಾತೆ ಹಂಚಿಕೆ ಮಾಡುವ ಕಾರ್ಯವನ್ನು ಹೈಕಮಾಂಡ್ ಮತ್ತು ಯಡಿಯೂರಪ್ಪ ಸೇರಿ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ- ಗೃಹ ಖಾತೆ, ಕೆ.ಎಸ್. ಈಶ್ವರಪ್ಪ-ಗ್ರಾಮೀಣಾಭಿವೃದ್ಧಿ (ಮೊದಲ ಪುಟದಿಂದ) ಮತ್ತು ಪಂಚಾಯತ್ ರಾಜ್, ವಿ.ಸೋಮಣ್ಣ- ವಸತಿ ಖಾತೆ, ಆರ್. ಅಶೋಕ್- ಕಂದಾಯ ಖಾತೆ, ಲಕ್ಷ್ಮಣ ಸವದಿ- ಸಾರಿಗೆ ಖಾತೆ, ಜಗದೀಶ್ ಶೆಟ್ಟರ್- ಬೃಹತ್ ಮತ್ತು ಮಾಧ್ಯಮ, ಕೈಗಾರಿಕೆ, ಅಶ್ವಥ್ ನಾರಾಯಣ್ - ಉನ್ನತ ಶಿಕ್ಷಣ ಸಚಿವ, ಐಟಿ-ಬಿಟಿ, ಗೋವಿಂದ ಕಾರಜೋಳ- ಲೋಕೋಪಯೋಗಿ, ಸಮಾಜ ಕಲ್ಯಾಣ, ಮಾಧುಸ್ವಾಮಿ- ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ ಮತ್ತು ಜಲಸಂಪನ್ಮೂಲ (ಹೆಚ್ಚುವರಿ), ಶ್ರೀರಾಮುಲು- ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಿಸಿ ಪಾಟೀಲ್- ಗಣಿ ಮತ್ತು ಭೂವಿಜ್ಞಾನ, ಸುರೇಶ್ ಕುಮಾರ್- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ, ಶಶಿಕಲಾ ಜೊಲ್ಲೆ- ಮಹಿಳಾ ಮತ್ತು ಮಕ್ಕಳ ಕಲ್ಯಾಣ, ¥ಭು ಚೌವ್ಹಾಣ್- ಪಶು ಸಂಗೋಪನೆ, ಕೋಟಾ ಶ್ರೀನಿವಾಸ ಪೂಜಾರಿ - ಬಂದರು ಮತ್ತು ಮೀನುಗಾರಿಕೆ, ಮುಜರಾಯಿ, ಸಿ.ಟಿ.ರವಿ- ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ (ಹೆಚ್ಚುವರಿ), ನಾಗೇಶ್ ಅವರಿಗೆ ಅಬಕಾರಿ ಖಾತೆಯ ಜವಾಬ್ದಾರಿ ನೀಡಲಾಗಿದೆ.