ಗೋಣಿಕೊಪ್ಪ, ಆ.26: ಯುವಕನೋರ್ವ ಚಿನ್ನ ಕಳವು ಮಾಡಿ ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ಗೂಸಾ ತಿಂದು ಪೊಲೀಸರ ಅತಿಥಿಯಾದ ಘಟನೆ ಗೋಣಿಕೊಪ್ಪ ನಗರದಲ್ಲಿ ನಡೆದಿದೆ. ಮೂಲತಃ ಹುಣಸೂರು ತಾಲೂಕಿನ ಹನುಗೋಡು ಹೋಬಳಿಯ ದೊಡ್ಡಹೆಚ್ಚೂರು ಗ್ರಾಮದ ದಿ.ಶಿವರಾಜ್‍ರವರ ಪುತ್ರನಾದ 22ರ ಪ್ರಾಯದ ಆರೋಪಿ ಸಿದ್ದರಾಜು ಕಳ್ಳತನ ಮಾಡುವದರಲ್ಲಿ ನಿಸ್ಸೀಮನಾಗಿದ್ದು ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿ ವಾಪಸ್ಸಾಗಿದ್ದ. ಹುಣಸೂರು ಹಾಗೂ ಪಿರಿಯಾಪಟ್ಟಣ ಠಾಣೆಗಳಲ್ಲಿ ಈತನ ಮೇಲೆ ಮೊಕದ್ದಮೆಗಳು ದಾಖಲಾಗಿವೆ.ದುಡಿದು ತಿನ್ನುವ ಬದಲು ಕಳ್ಳತನದಿಂದ ಜೀವನ ಸಾಗಿಸುವದೇ ಈತನ ಚಟ (ಮೊದಲ ಪುಟದಿಂದ) ಎಂದು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ. ಚಿನ್ನ ತೆಗೆಯುವ ನೆಪದಲ್ಲಿ ಪ್ರತಿಷ್ಠಿತ ಜ್ಯುವೆಲ್ಲರಿ ಅಂಗಡಿಗಳಿಗೆ ಭೇಟಿ ನೀಡುವ ಈತ ಅಲ್ಲಿರುವ ಸಿಬ್ಬಂದಿಗಳನ್ನು ಯಾಮಾರಿಸಿ ಉಂಗುರ ಎಗರಿಸಿ ತೆರಳುವದು ಇವನಿಗೆ ಮಾಮೂಲಿಯಾಗಿದೆ. ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಕಳ್ಳತನ ನಡೆಸುವ ಈತ ಒಂದು ಬಾರಿ ಕಳ್ಳತನ ಮಾಡಿದ ಅಂಗಡಿಗೆ ಮತ್ತೊಂದು ಬಾರಿ ತೆರಳುವದಿಲ್ಲ. ಹೊಸ ಹೊಸ ಜ್ಯುವೆಲ್ಲರಿ ಮಳಿಗೆಗಳಿಗೆ ತೆರಳುವ ಈತ ಉಂಗುರವನ್ನು ಮಾತ್ರ ಎಗರಿಸುತ್ತಾನೆ.

ಇತ್ತೀಚೆಗೆ ಹಾಡಹಗಲೇ ಮಧ್ಯಾಹ್ನದ ಸುಮಾರು 12 ಗಂಟೆಯ ವೇಳೆ ಈತ ಗೋಣಿಕೊಪ್ಪ ನಗರದ ಪ್ರತಿಷ್ಠಿತ ಜ್ಯುವೆಲ್ಲರಿ ಮಳಿಗೆಗಳ ಶೋ ರೂಂಗೆ ಗ್ರಾಹಕನಂತೆ ತೆರಳಿ ಶೋ ರೂಮಿನ ಒಳಗಡೆ ಅಡ್ಡಾಡಿಕೊಂಡು ಇದ್ದ ಸಂದರ್ಭ ಸಂಶಯಗೊಂಡ ಅಲ್ಲಿಯ ಸಿಬ್ಬಂದಿ ಆತನನ್ನು ಹೊರ ಕಳುಹಿಸುತ್ತಿದ್ದಂತೆಯೇ ತಾನು ಕಳ್ಳ ಎಂದು ಇಲ್ಲಿಯ ಜನತೆಗೆ ಗೊತ್ತಾಗಿದೆ ಎಂಬ ಬಗ್ಗೆ ಅನುಮಾನಗೊಂಡ ಈತ ಅಲ್ಲಿಂದ ಹೊರ ಬಂದು ಮೆಟ್ಟಿಲಿನ

(ಮೊದಲ ಪುಟದಿಂದ) ಎಂದು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ. ಚಿನ್ನ ತೆಗೆಯುವ ನೆಪದಲ್ಲಿ ಪ್ರತಿಷ್ಠಿತ ಜ್ಯುವೆಲ್ಲರಿ ಅಂಗಡಿಗಳಿಗೆ ಭೇಟಿ ನೀಡುವ ಈತ ಅಲ್ಲಿರುವ ಸಿಬ್ಬಂದಿಗಳನ್ನು ಯಾಮಾರಿಸಿ ಉಂಗುರ ಎಗರಿಸಿ ತೆರಳುವದು ಇವನಿಗೆ ಮಾಮೂಲಿಯಾಗಿದೆ. ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಕಳ್ಳತನ ನಡೆಸುವ ಈತ ಒಂದು ಬಾರಿ ಕಳ್ಳತನ ಮಾಡಿದ ಅಂಗಡಿಗೆ ಮತ್ತೊಂದು ಬಾರಿ ತೆರಳುವದಿಲ್ಲ. ಹೊಸ ಹೊಸ ಜ್ಯುವೆಲ್ಲರಿ ಮಳಿಗೆಗಳಿಗೆ ತೆರಳುವ ಈತ ಉಂಗುರವನ್ನು ಮಾತ್ರ ಎಗರಿಸುತ್ತಾನೆ.

ಇತ್ತೀಚೆಗೆ ಹಾಡಹಗಲೇ ಮಧ್ಯಾಹ್ನದ ಸುಮಾರು 12 ಗಂಟೆಯ ವೇಳೆ ಈತ ಗೋಣಿಕೊಪ್ಪ ನಗರದ ಪ್ರತಿಷ್ಠಿತ ಜ್ಯುವೆಲ್ಲರಿ ಮಳಿಗೆಗಳ ಶೋ ರೂಂಗೆ ಗ್ರಾಹಕನಂತೆ ತೆರಳಿ ಶೋ ರೂಮಿನ ಒಳಗಡೆ ಅಡ್ಡಾಡಿಕೊಂಡು ಇದ್ದ ಸಂದರ್ಭ ಸಂಶಯಗೊಂಡ ಅಲ್ಲಿಯ ಸಿಬ್ಬಂದಿ ಆತನನ್ನು ಹೊರ ಕಳುಹಿಸುತ್ತಿದ್ದಂತೆಯೇ ತಾನು ಕಳ್ಳ ಎಂದು ಇಲ್ಲಿಯ ಜನತೆಗೆ ಗೊತ್ತಾಗಿದೆ ಎಂಬ ಬಗ್ಗೆ ಅನುಮಾನಗೊಂಡ ಈತ ಅಲ್ಲಿಂದ ಹೊರ ಬಂದು ಮೆಟ್ಟಿಲಿನ ಸಾರ್ವಜನಿಕರಿಗೆ ಈತ ಸಿಕ್ಕಿಬಿದ್ದು ಹಣ್ಣುಗಾಯಿ ನೀರುಗಾಯಿ ಆಗಿದ್ದಾನೆ. ಈತನನ್ನು ವಶಕ್ಕೆ ಪಡೆದ ಗೋಣಿಕೊಪ್ಪ ಪೊಲೀಸರಲ್ಲಿ ಕಳ್ಳತನ ಮಾಡಿದ ಸತ್ಯವನ್ನು ಬಾಯಿ ಬಿಟ್ಟಿದ್ದಾನೆ. ಈತನನ್ನು ವಶಕ್ಕೆ ಪಡೆದು ಹುಣಸೂರಿನಲ್ಲಿ ಮಾರಾಟ ಮಾಡಿದ್ದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಗೋಣಿಕೊಪ್ಪ ಸರ್ಕಲ್ ಇನ್ಸ್‍ಪೆಕ್ಟರ್ ದಿವಾಕರ್ ನೇತೃತ್ವದಲ್ಲಿ ವಶಕ್ಕೆ ಪಡೆದ ಈತನನ್ನು ಬಾಯಿ ಬಿಡಿಸುವಲ್ಲಿ ಗೋಣಿಕೊಪ್ಪ ಠಾಣಾಧಿಕಾರಿ ಮಂಚಯ್ಯ, ಸಿಬ್ಬಂದಿಗಳಾದ ಸುರೇಂದ್ರ, ಮನು, ಶೇಖರ್ ಹಾಗೂ ಹನೀಫ್ ಯಶಸ್ವಿಯಾಗಿದ್ದಾರೆ. ಇತ್ತಿಚೇಗೆ ಹೊರ ಜಿಲ್ಲೆಯ ಯುವಕರು ಕಳ್ಳತನ ನಡೆಸಲು ನಗರಕ್ಕೆ ಆಗಮಿಸುತ್ತಿದ್ದು ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು,ಸಂಶಯ ಬಂದವರ ಮೇಲೆ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಪೊಲೀಸರು ತಿಳಿಸಿದ್ದಾರೆ.

- ಹೆಚ್. ಕೆ. ಜಗದೀಶ್, ಎನ್. ಎನ್. ದಿನೇಶ್