ಶ್ರೀಮಂಗಲ, ಆ. 25 : ದಕ್ಷಿಣ ಕೊಡಗಿಗೆ ಮೈಸೂರು ಭಾಗಕ್ಕೆ ಸಂಪರ್ಕ ಕಲ್ಪಿಸುವ ಆನೆಚೌಕೂರು ತಿತಿಮತಿ ರಸ್ತೆಯನ್ನು ರಾತ್ರಿ ಸಮಯ ಸಂಚಾರ ನಿರ್ಬಂಧಿಸುವ ಯಾವದೇ ತೀರ್ಮಾನಕ್ಕೆ ಕೊಡಗು ವನ್ಯ ಜೀವಿ ಸಂಘದ ಮಾಜಿ ಅಧ್ಯಕ್ಷ ನಿವೃತ್ತ ಸೇನಾಧಿಕಾರಿ ಕರ್ನಲ್ ಚೆಪ್ಪುಡೀರ .ಪಿ. ಮುತ್ತಣ್ಣ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಮಾರ್ಗ ಯಥಾಸ್ಥಿತಿ ಮುಂದುವರೆಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪೆÇನ್ನಂಪೇಟೆಯಲ್ಲಿರುವ ಕೊಡಗು ವನ್ಯಜೀವಿ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು ಆನೆಚೌಕೂರು ತಿತಿಮತಿ ರಸ್ತೆ ರಾತ್ರಿ ಸಂಚಾರ ನಿರ್ಬಂಧಿಸುವ ಬಗ್ಗೆ ಕೆಲವು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದು, ಇದರ ವಾಸ್ತವಾಂಶದ ಬಗ್ಗೆ ಉನ್ನತಾಧಿಕಾರಿಗಳಿಂದ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಹೇಳಿದರು.
ಗೋಣಿಕೊಪ್ಪಲುವಿನಿಂದ ತಿತಿಮತಿ ಮೂಲಕ ಮೈಸೂರಿಗೆ ಹೋಗುವ ಮಾರ್ಗದಲ್ಲಿ ಎಡಭಾಗದ ಅರಣ್ಯವು ದೇವಮಚ್ಚಿ ಮೀಸಲು ಅರಣ್ಯವಾಗಿದ್ದು, ಬಲಬದಿಯಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವಿದ್ದು, ಉದ್ಯಾನವನವು ಈಗಾಗಲೇ ಹುಲಿ ಸಂರಕ್ಷಣಾ ಮೀಸಲು ಅರಣ್ಯ ಆಗಿದ್ದು, ಇದರ ಒತ್ತಿನಲ್ಲಿರುವ ದೇವಮಚ್ಚಿ ಅರಣ್ಯವನ್ನು ನಾಗರಹೊಳೆ ಹುಲಿ ಸಂರಕ್ಷಣಾ ಮೀಸಲು ಅರಣ್ಯದ ‘ಬಫೆÇೀರ್eóÉೂೀನ್’ ಎಂದು ಈಗಾಗಲೇ ಘೋಷಿಸಲಾಗಿದೆ ಎಂದು ವಿವರಿಸಿದರು.
ದೇವಮಚ್ಚಿ ಅರಣ್ಯವನ್ನು ಬಫೆÇೀರ್eóÉೂೀನ್ ಎಂದು ಘೋಷಿಸಿರುವದಕ್ಕೆ ನಮ್ಮ ಅಭ್ಯಂತರವಿಲ್ಲ. ಏಕೆಂದರೆ ಇದು ಅರಣ್ಯ ವ್ಯಾಪ್ತಿಗೆ ಮಾತ್ರ ಸೀಮಿತವಾಗಿದ್ದು, ಖಾಸಗಿ ಜಾಗಕ್ಕೆ ಅನ್ವಯವಾಗುವದಿಲ್ಲ ಎಂದು ಹೇಳಿದರು.