ಮಡಿಕೇರಿ, ಆ. 25: ಮೂವರು ಗೋವು ಕಳ್ಳರನ್ನು ಗ್ರಾಮಸ್ಥರು ಹಿಡಿದು ಪೆÇಲೀಸರಿಗೆ ಒಪ್ಪಿಸಿದ ಘಟನೆ ಸಮೀಪದ ಯವಕಪಾಡಿ ಗ್ರಾಮದಲ್ಲಿ ನಡೆದಿದೆ.

ಕುಂಜಿಲ ಗ್ರಾಮದ ಕೆ.ಕಾರ್ತಿಕ್, ಯವಕಪಾಡಿ ಗ್ರಾಮದ ಹೆಚ್.ಲೋಕೇಶ್, ಹೆಚ್.ಅರುಣ ಎಂಬವರುಗಳು ಗೋ ಕಳ್ಳತನದ ಆರೋಪದಲ್ಲಿ ಬಂಧನಕ್ಕೊಳಗಾದವರು. ಯವಕಪಾಡಿ ಗ್ರಾಮದ ಅಪ್ಪಯ್ಯ ಅವರಿಗೆ ಸೇರಿದ ಕಪ್ಪು ಬಣ್ಣದ ಹೋರಿ ಕಾಣೆಯಾಗಿತ್ತು. ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಈ ಮೂವರನ್ನು ಗ್ರಾಮದ ಜನ ಹಿಡಿದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂತು. ಕೂಡಲೇ ನಾಪೆÇೀಕ್ಲು ಪೆÇಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ ಹಿನ್ನಲೆಯಲ್ಲಿ ಸ್ಥಳಕ್ಕಾಗಮಿಸಿದ ನಾಪೆÇೀಕ್ಲು ಪೆÇಲೀಸ್ ಠಾಣಾಧಿಕಾರಿ ಮತ್ತು ಸಿಬ್ಬಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಳುವಾಗಿದ್ದ ಗೋವನ್ನು ಪಡಿಯಾಣಿಗೆ ಮಾರಾಟ ಮಾಡಿದ್ದು, ಅದನ್ನು ವಾರಸುದಾರರಿಗೆ ನೀಡಲಾಗಿದೆ.