ವೀರಾಜಪೇಟೆ, ಆ. 25: ಸಾರ್ವಜನಿಕರ ಸುರಕ್ಷತೆಯ ದೃಷ್ಟಿ ಯಿಂದ ಇಲಾಖೆ ಕೆಲವು ನಿರ್ಬಂಧ ಗಳನ್ನು ಹಾಕಲಾಗುತ್ತದೆ. ಎಲ್ಲರೂ ಸಹಕರಿಸಬೇಕು.. ಗೌರಿಗಣೇಶೋತ್ಸವ ಸಂಭ್ರಮ ಶಾಂತಿ ಸುವ್ಯವಸ್ಥೆಯಿಂದ ಆಚರಿಸಲು ಪೊಲೀಸ್ ಇಲಾಖೆ ಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವದು ಎಂದು ಡಿವೈಎಸ್ಪಿ ವಿಜಯಕುಮಾರ್ ಹೇಳಿದರು.
ವೀರಾಜಪೇಟೆ ನಗರದ ಪೆÇಲೀಸ್ ಸಂಕೀರ್ಣದಲ್ಲಿ ನಡೆದ ಸಭೆಯಲ್ಲಿ ಮೊದಲು ಗಣಪತಿ ಸಮಿತಿಯ ಸದಸ್ಯರನ್ನು ಉತ್ಸವ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದರು. ನಂತರ ವೀರಾಜಪೇಟೆ ನಗರದ ಠಾಣಾಧಿಕಾರಿ ಸಂತೋಷ್ ಕಶ್ಯಪ್ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವು ಎಲ್ಲಾ ಸಮಿತಿಯ ಸದಸ್ಯರು ಸಹಕರಿಸಿ ಉತ್ಸವ ಯಶಸ್ವಿಗೆ ಕಾರಣಕರ್ತರಾಗಬೇಕು. ರೌಡಿ ಶಿಟರ್ಗಳನ್ನು ಈ ಬಾರಿಯೂ ಹೊರಗಿಡಲಾಗುವದು. ಅವರಿಂದ ತೊಂದರೆ ಆದಲ್ಲಿ ಅಂತವರನ್ನು ವಿಸರ್ಜನೆಯ ದಿನದಂದು ಠಾಣೆಯಲ್ಲಿ ಉಳಿಸಿಕೊಂಡು ಕಾರ್ಯಕ್ರಮ ಮುಗಿದ ಮೇಲೆ ಬಿಡಲಾಗುವದು ಎಂದು ಸಭೆಗೆ ಮಾಹಿತಿ ನೀಡಿದರು.
ವೃತ ನೀರಿಕ್ಷಕ ಕ್ಯಾತೇಗೌಡ ಮಾತನಾಡಿ ನಾನು ಮತ್ತು ಡಿವೈಎಸ್ಪಿ ಹೊಸಬರಾಗಿದ್ದರೂ, ಇಲ್ಲಿ ನಡೆಯುವ ಉತ್ಸವದ ಬಗ್ಗೆ ಮಾಹಿತಿ ತಿಳಿದು ಕೊಂಡಿದ್ದೇವೆ. ಸೂಕ್ತ ರೀತಿಯಲ್ಲಿ ರಕ್ಷಣೆ ನೀಡುತ್ತದೆ ಮತ್ತು ರಸ್ತೆ, ಚೆಸ್ಕಾಂ, ಲೋಕೊಪಯೋಗಿ, ಅಗ್ನಿಶಾಮಕ ಇಲಾಖೆ ಎಲ್ಲರೊಂದಿಗೆ ಸಂಪರ್ಕ ಮಾಡಿ ಬೇರೆಯವರಿಗೆ ಯಾವದೇ ತೊಂದರೆ ಆಗದ ರೀತಿಯಲ್ಲಿ ಉತ್ಸವ ಆಚರಿಸೋಣ ಎಂದರು.
ವೇದಿಕೆಯಲ್ಲಿ ಎಸ್ಐ, ವೀಣಾ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ಎಲ್ಲಾ ಸಮಿತಿಯ ಅಧ್ಯಕ್ಷರುಗಳು, ಪದಾಧಿಕಾರಿಗಳು, ಪ್ರಮುಖರು ಸಭೆಯಲ್ಲಿ ಹಾಜರಿದ್ದರು.
ಗೋಣಿಕೊಪ್ಪ ವರದಿ: ಗೌರಿ-ಗಣೇಶ ಮೂರ್ತಿ ವಿಸರ್ಜನೆ ಸಂದರ್ಭ ಜೀವರಕ್ಷಕ ಜಾಕೆಟ್ ಕಡ್ಡಾಯವಾಗಿ ಬಳಸಬೇಕು ಎಂದು ವೃತ್ತ ನಿರೀಕ್ಷಕ ದಿವಾಕರ್ ಹೇಳಿದರು.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಗೌರಿ-ಗಣೇಶ ಹಬ್ಬ ಶಾಂತಿ ಸಭೆ ಮತ್ತು ಸಲಹಾ ಸಭೆಯಲ್ಲಿ ಅವರು ಮಾತನಾಡಿದರು.
ಮೂರ್ತಿ ವಿಸರ್ಜನೆ ಸಂದರ್ಭ ನುರಿತ ಈಜುಗಾರರನ್ನು ಆಯಾ ಗೌರಿ-ಗಣೇಶ ಉತ್ಸವ ಸಮಿತಿ ಆಯ್ಕೆ ಮಾಡಿಕೊಂಡು ಜೀವಕ್ಕೆ ಅಪಾಯವಾಗದಂತೆ ಯೋಜನೆ ರೂಪಿಸಿಕೊಳ್ಳಬೇಕಿದೆ. ಕಡ್ಡಾಯವಾಗಿ ನೀರಿನಲ್ಲಿ ತೇಲುವಂತಹ ತಂತ್ರಜ್ಞಾನವಿರುವ ಜೀವರಕ್ಷಕ ಜಾಕೆಟ್ ಬಳಸಿಕೊಂಡು ಉತ್ಸವ ಆಚರಿಸಲು ಸೂಚನೆ ನೀಡಿದರು.
ಹಬ್ಬವನ್ನು ಸಾಮರಸ್ಯದಿಂದ ಆಚರಿಸಬೇಕು. ಮೂರ್ತಿ ಪ್ರತಿಷ್ಠಾಪನಾ ಸ್ಥಳದಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು. ಡಿಜೆ ಬಳಸದೆ ವಿಸರ್ಜನಾ ಮೆರವಣಿಗೆ ನಡೆಸಬೇಕು. ಕಾನೂನಿಗೆ ಗೌರವ ನೀಡಬೇಕು. ಮೆರವಣಿಗೆ ಬೆಳಗ್ಗಿನ ಜಾವದವರೆಗೂ ಮುಂದುವರಿಯದಂತೆ ಸಲಹೆ ನೀಡಿದರು. ಪ್ರತೀ ಸಮಿತಿಗಳು ಕೂಡ ಪ್ರತಿಷ್ಠಾಪನೆ, ವಿಸರ್ಜನಾ ಮೆರವಣಿಗೆ, ಕಾರ್ಯಕ್ರಮಗಳು, ವಿಸರ್ಜನಾ ಮಾರ್ಗದ ಬಗ್ಗೆ ಮಾಹಿತಿ ನೀಡುವಂತೆ ಅವರು ಸೂಚಿಸಿದರು. ಸಭೆಯಲ್ಲಿ ಈರಣ್ಣ ಕಾಲನಿ, ಉಮಾಮಹೇಶ್ವರಿ ದೇವಸ್ಥಾನ, ಮೈಸೂರಮ್ಮ ನಗರ, ಜೋಡುಬೀಟಿ, ಮಡಿಕೆಬೀಡು, ಮಾಯಮುಡಿ, ಮರಪಾಲ, ಮರೂರು ಭಾಗದ ಉತ್ಸವ ಸಮಿತಿಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭ ಪೊಲೀಸ್ ಉಪ ನಿರೀಕ್ಷಕ ಆರ್. ಮಂಚಯ್ಯ, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಎನ್. ಪ್ರಕಾಶ್, ಮಂಜುಳ, ಪ್ರಮುಖರಾದ ಕುಲ್ಲಚಂಡ ಚಿಣ್ಣಪ್ಪ, ಕಿಲನ್ ಗಣಪತಿ, ಅಬ್ದುಲ್ ಸಮ್ಮದ್, ತನ್ವಿರ್ ಅಹಮ್ಮದ್ ಇದ್ದರು.