ಕುಶಾಲನಗರ, ಆ. 25: ನದಿ ನೀರು ತುಂಬಿ ಮನೆಗೆ ಹಾನಿ ಸಂಭವಿಸಿದ ಹಿನ್ನಲೆಯಲ್ಲಿ ಕುಶಾಲ ನಗರ ಸಮೀಪ ಕೊಪ್ಪ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ಕೊಪ್ಪ ಗ್ರಾಮದ ಆವರ್ತಿ ರಸ್ತೆಯ ನಿವಾಸಿ ನಂದಲಪಂಡ ರವಿ ಕಾರ್ಯಪ್ಪ (55) ಎಂಬಾತ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕಳೆದ ಎರಡು ವರ್ಷಗಳ ಹಿಂದೆ ನೂತನ ಮನೆ ನಿರ್ಮಿಸಿದ್ದು ಇತ್ತೀಚೆಗೆ ಬಂದ ಪ್ರವಾಹದಲ್ಲಿ ಮನೆಗೆ ನೀರು ನುಗ್ಗಿ ನಷ್ಟಕ್ಕೊಳಗಾದ ಹಿನ್ನಲೆಯಲ್ಲಿ ಕಾರ್ಯಪ್ಪ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನೇಣಿಗೆ ಶರಣಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.