ಮಡಿಕೇರಿ, ಆ. 25: ಕುಶಾಲನಗರ ವಲಯ ಅರಣ್ಯಾಧಿಕಾರಿ ಅವರು ಸೊತ್ತಿನ ಸಮೇತ ಅಶೋಕ ಲೈಲ್ಯಾಂಡ್ ವಾಹನ ಕೆಎಲ್ 58 ಡಬ್ಲ್ಯೂ 9863 ವಾಹನವನ್ನು ಸರ್ಕಾರ ಪರ ಅಮಾನತ್ತು ಪಡಿಸಿದ್ದು, ಕರ್ನಾಟಕ ಅರಣ್ಯ ಕಾಯ್ದೆ (ಅಧಿನಿಯಮ 2ನೇ ತಿದ್ದುಪಡಿ) 1963ರ ಸೆಕ್ಷನ್ 71(ಎ) ಯಿಂದ (ಜೆ) ಪ್ರಕಾರ ವಿಚಾರಣೆ ನಡೆಸಿ ವಾಹನ ಮತ್ತು ಸೊತ್ತನ್ನು ಸರ್ಕಾರದ ಪರ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಈ ವಾಹನದ ಬಗ್ಗೆ ಯಾರಿಂದಲೂ ಈವರೆಗೂ ಹಕ್ಕುಭಾದ್ಯತೆ ಇರುವದಿಲ್ಲ. ಆದ್ದರಿಂದ ವಾಹನದ ನಿಜವಾದ ಮಾಲೀಕರು ಯಾರಾದರೂ ಇದ್ದಲ್ಲಿ ಅಂತಹ ವ್ಯಕ್ತಿಗಳು ಮಾಲೀಕತ್ವದ ಪೂರ್ಣ ದಾಖಲಾತಿಗಳೊಂದಿಗೆ 30 ದಿನಗಳೊಳಗೆ ಪ್ರಾಧಿಕಾರಿ ಅಧಿಕಾರಿಗಳ ಮುಂದೆ ಹಾಜರಾಗಿ ತಮ್ಮ ಮಾಲೀಕತ್ವದ ಹಕ್ಕು ಭಾದ್ಯತೆಯನ್ನು ರುಜುವಾತು ಪಡಿಸಬೇಕು ಹಾಗೂ ಈ ವಾಹನದ ಮಾಲೀಕರು ಅಥವಾ ಅವರ ಪ್ರತಿನಿಧಿಗಳು ವಾಹನವು ಅರಣ್ಯ ಅಪರಾಧದಲ್ಲಿ ಭಾಗಿಯಾಗಿಲ್ಲವೆಂದು ರುಜುವಾತು ಪಡಿಸಬೇಕು. ನಿಗದಿತ ಅವಧಿಯೊಳಗೆ ಯಾರಿಂದಲೂ ಯಾವದೇ ಅಹವಾಲು ಬಾರದೇ ಇದ್ದಲ್ಲಿ ವಾಹನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವದು ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅಧಿಕೃತ ಅಧಿಕಾರಿ ಎಸ್. ಪ್ರಭಾಕರನ್ ತಿಳಿಸಿದ್ದಾರೆ.