ಕುಶಾಲನಗರ, ಆ 24: `ಶಕ್ತಿ’ ಸಂಸ್ಥಾಪಕ ಸಂಪಾದಕರಾದ ದಿ.ಬಿ.ಎಸ್.ಗೋಪಾಲಕೃಷ್ಣ ಅವರ 90ನೇ ಹುಟ್ಟುಹಬ್ಬವನ್ನು ಕುಶಾಲನಗರ ಕಾವೇರಿ ನದಿ ತಟದಲ್ಲಿ ಗಿಡ ನೆಡುವ ಮೂಲಕ ಆಚರಿಸಲಾಯಿತು.

ಸ್ಥಳೀಯ ಸುದ್ದಿ ಸೆಂಟರ್ ಆಶ್ರಯದಲ್ಲಿ ಬಳಗದ ಸದಸ್ಯರು ಪತ್ರಿಕಾ ಭೀಷ್ಮ ಗೋಪಾಲಕೃಷ್ಣ ಅವರ ಸ್ಮರಣೆ ಮಾಡುವದರೊಂದಿಗೆ ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ನದಿ ತಟದಲ್ಲಿ ಹೊಂಗೆ ಗಿಡ ನೆಟ್ಟು ಸ್ಮರಿಸಿದರು.

ಬಳಗದ ಎಂ.ಎನ್. ಚಂದ್ರ ಮೋಹನ್, ಕೆ.ಕೆ. ನಾಗರಾಜಶೆಟ್ಟಿ, ಸುನೀಲ್ ಪೊನ್ನೇಟಿ, ವಿನೋದ್, ಟಿ.ಜಿ. ಪ್ರೇಮ್‍ಕುಮಾರ್, ಚೈತನ್ಯ, ಡಿ.ಆರ್. ಸೋಮಶೇಖರ್, ಕೆ.ಆರ್. ಶಿವಾನಂದ, ಬಿ.ಜೆ.ಅಣ್ಣಯ್ಯ ಇದ್ದರು.