ಮಡಿಕೇರಿ, ಆ. 24: ಕದನೂರು ಗ್ರಾ.ಪಂ.ಗೆ ಒಳಪಡುವ ಅರಮೇರಿ ಗ್ರಾಮದ ವಾರ್ಡ್‍ಸಭೆ ತಾ. 27ರಂದು ಪೂರ್ವಾಹ್ನ 10.30 ಗಂಟೆಗೆ ಕದನೂರು ಗ್ರಾ.ಪಂ. ಕಚೇರಿಯಲ್ಲಿ ನಡೆಯಲಿದೆ. ಕದನೂರು ಗ್ರಾಮದ ವಾರ್ಡ್‍ಸಭೆ ಅದೇ ದಿನದಂದು ಪೂರ್ವಾಹ್ನ 12 ಗಂಟೆಗೆ ಕೆ.ಬೋಯಿಕೇರಿ ಅಂಗನವಾಡಿ ಕಟ್ಟಡದಲ್ಲಿ ನಡೆಯಲಿದೆ. ಚಾಮಿಯಾಲ ಗ್ರಾಮದ ವಾರ್ಡ್ ಸಭೆ ತಾ. 27ರಂದು ಅಪರಾಹ್ನ 2 ಗಂಟೆಗೆ ಚಾಮಿಯಾಲ ಮಸೀದಿ ಕಟ್ಟಡದಲ್ಲಿ ನಡೆಯಲಿದೆ. ಮೈತಾಡಿ ಗ್ರಾಮದ ವಾರ್ಡ್‍ಸಭೆ ತಾ. 27ರಂದು ಅಪರಾಹ್ನ 3.30 ಗಂಟೆಗೆ ಶ್ರೀ ಅಯ್ಯಪ್ಪ ದೇವಸ್ಥಾನ ಕಟ್ಟಡದಲ್ಲಿ ನಡೆಯಲಿದೆ.