ನಾಪೆÇೀಕ್ಲು, ಆ. 24: ಕಾರ್ಯಕ್ರಮಗಳಲ್ಲಿ ದೀಪ ಬೆಳಗಿಸುವದು ಯಾವದೇ ಜಾತಿ, ಧರ್ಮದ ಸಂಕೇತವಲ್ಲ. ಜ್ಞಾನ ಕತ್ತಲಿನಿಂದ ಬೆಳಕಿನೆಡೆಗೆ ಸಾಗಲಿ ಎಂಬದು, ಇದು ಭಾರತದ ಸಂಸ್ಕøತಿ, ಇದೇ ಭಾರತೀಯತೆ, ಇದು ಭಾರತದ ಧರ್ಮ ಎಂದು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಪರ ಆಯುಕ್ತ ಡಾ. ಹೆಳವರಹುಂಡಿ ಸಿದ್ದಪ್ಪ ಹೇಳಿದರು.
ನಾಪೆÇೀಕ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸ ಲಾಗಿದ್ದ ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಸಂಸ್ಕøತಿಯನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಮಂಗನಿಂದ ಮಾನವ. ಸಂಸ್ಕøತಿ ನಡವಳಿಕೆಯಿಂದ ಮಾನವ ಮನುಷ್ಯನಾದ ಎಂದರು.
ಸಂಸ್ಕøತಿ ಎಂದರೆ ಹಾಡುವದು, ನೃತ್ಯ ಮಾಡುವದು ಮಾತ್ರವಲ್ಲ. ದೇಶದ ಕಲೆ, ಶಿಲ್ಪಕಲೆ, ಭಾಷೆ, ನೆಲ, ಜಲ, ಆಚಾರ, ವಿಚಾರ, ನಂಬಿಕೆ, ಸಂಬೋಧನೆ ಎಲ್ಲವು ಸಂಸ್ಕøತಿ ಎಂದರು.
ಎನ್ಎಸ್ಎಸ್ ಘಟಕದ ಉದ್ಘಾಟನೆಯನ್ನು ಕನ್ನಡ ಚಳವಳಿಗಾರ ಹಾಗೂ ಮೈಸೂರು ಜಿಲ್ಲಾ ಶರಣ ಮಂಡಳಿ ಅಧ್ಯಕ್ಷ ಮೂಗೂರು ನಂಜುಂಡ ಸ್ವಾಮಿ ಉದ್ಘಾಟಿಸಿ ಮಾತನಾಡಿದರು. ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಂದ್ರಶೇಖರ್ ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ನಾಪೆÇೀಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ.ಇಸ್ಮಾಯಿಲ್ ಮಾತನಾಡಿದರು. ಅಧ್ಯಕ್ಷತೆಯನ್ನು ನಾಪೆÇೀಕ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಕಾವೇರಿ ಪ್ರಕಾಶ್ ವಹಿಸಿದ್ದರು.
ವೇದಿಕೆಯಲ್ಲಿ ಮೈಸೂರು ಸರಕಾರಿ ನೌಕರರ ಗೃಹ ನಿರ್ಮಾಣ ಸಂಘದ ಅಧ್ಯಕ್ಷ ಮಹೇಶ್, ಮೈಸೂರು ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಹೊಸಪುರ ಕೆ.ಮಲ್ಲು, ಟಿ.ನರಸಿಪುರ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕುಮಾರ ಸ್ವಾಮಿ, ಮೈಸೂರು ಕನ್ನಡ ಜಾನಪದ ಪರಿಷತ್ತು ಅಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್, ನಾಪೆÇೀಕ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೆಯಂಡ ಸಾಬಾ ತಿಮ್ಮಯ್ಯ ಮತ್ತಿತರರಿದ್ದರು. ವಿದ್ಯಾರ್ಥಿನಿಯರಿಂದ ಪ್ರಾರ್ಥನೆ, ಉಪನ್ಯಾಸಕರಾದÀ ಮುದ್ದಪ್ಪ ಸ್ವಾಗತ. ನಂದೀಶ್ ಅತಿಥಿಗಳನ್ನು ಪರಿಚಯಿಸಿದರೆ, ಜೀವಿತಾ ಸ್ವಾಗತಿಸಿ, ವಿನೋದ್ ವಂದಿಸಿದರು.