ವೀರಾಜಪೇಟೆ, ಆ. 24: ಭೂ ಕುಸಿತವಾದ ತೋರ ಗ್ರಾಮದಲ್ಲಿ ಮನೆ ಮತ್ತು ಕುಟುಂಬದ ಸದಸ್ಯರನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದ ಮನೆಯ ಸಾಮಗ್ರಿಗಳು ಇಂದು ಪತ್ತೆಯಾಗಿವೆ.
ವೀರಾಜಪೇಟೆ ಭೂ ಕುಸಿತವಾದ ಕೆದಮುಳ್ಳೂರು ಗ್ರಾಮದ ತೋರದಲ್ಲಿ ಘಟಿಸಿದ ಘನಘೋರವಾದ ದುರ್ಘಟನೆಯಲ್ಲಿ ವಾಸದ ಮನೆ ಮತ್ತು ತಮ್ಮ ಕುಟುಂಬದ ಅಂಗಗಳನ್ನು ಕಳೆದುಕೊಂಡು ಇಂದು ನಿರಾಶ್ರಿತರಾಗಿದ್ದಾರೆ. ಕಾಣೆಯಾಗಿರುವ ಕುಟುಂಬದ ಸದಸ್ಯರ ಶೋಧ ಕಾರ್ಯ ಮುಂದುವರೆದಿದ್ದು, ಘಟನೆ ನಡೆದು ಇಂದಿಗೆ 15 ದಿನಗಳು ಕಳೆದಿವೆ. ಇಂದು ಹರೀಶ್ ಕುಟುಂಬ ವಾಸ ಮಾಡುತ್ತಿದ್ದ ಕೀತಿಯಂಡ ಮಂದಪ್ಪ ಅಗಸ್ತ್ಯ ಲೈನ್ಮನೆಯ ಕುರುಹುಗಳು ಪತ್ತೆಯಾದವು. ಅವರು ಉಪಯೋಗಿಸುತ್ತಿದ್ದ ಗ್ಯಾಸ್ ಸಿಲಿಂಡರ್, ಗ್ಯಾಸ್ ಸ್ಟವ್, ಪಾತ್ರಗಳು, ಇತರ ವಸ್ತುಗಳು ಪತ್ತೆಯಾಗಿವೆ. ನಿನ್ನೆ ಇದೇ ಲೈನ್ಮನೆಯಲ್ಲಿ ವಾಸವಾಗಿದ್ದ ಅಪ್ಪು ಅವರ ಪತ್ನಿ ಲೀಲಾ ಅವರ ಶವ ಪತ್ತೆಯಾಗಿತ್ತು. ಶೋಧ ಕಾರ್ಯದ ಮೇಲ್ವಿಚಾರಕರಾಗಿ ಎನ್.ಡಿ.ಆರ್.ಎಫ್.ನ ಟೀಮ್ ಕಮಾಂಡರ್ ಅಧೀಕ್ಷಕ ಉದಿತ್ ಕುಮಾರ್ ದೀಕ್ಷಿತ್ ಮತ್ತು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.