ವೀರಾಜಪೇಟೆ, ಆ. 23 : ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ತಾ. 31 ಮತ್ತು ಸೆಪ್ಟಂಬರ್ 1 ರಂದು ಕಾವೇರಿ ಕಾಲೇಜು ವೀರಾಜಪೇಟೆಯಲ್ಲಿ ಕೂರ್ಗ್ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಮತ್ತು ಕಾವೇರಿ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಮುರುವಂಡ ನಂಜಪ್ಪ ಅವರ ಜ್ಞಾಪಕಾರ್ಥ ಜಿಲ್ಲಾ ಮುಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯನ್ನು ಆಯೋಜಿಸ ಲಾಗಿದೆ ಎಂದು ಕಾವೇರಿ ಕಾಲೇಜು ಪ್ರಾಂಶುಪಾಲೆÀ ಪ್ರೊ. ಇಟ್ಟಿರ ಕಮಲಾಕ್ಷಿ ಬಿದ್ದಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬಾಲಕ - ಬಾಲಕಿಯರು ಪ್ರೌಢ, ಪದವಿ ಪೂರ್ವ ಹಾಗೂ ಪದವಿ ಕಾಲೇಜು ವಿಭಾಗಗಳಾಗಿ ವಿಂಗಡಿಸಲಾಗಿದೆ. ಪುರುಷರು ಹಾಗೂ ಮಹಿಳೆಯರಿಗೆ ಮುಕ್ತ ಅವಕಾಶವನ್ನು ನೀಡಲಾಗಿದೆ. ಹೆಸರು ನೊಂದಾಯಿಸಲು ತಾ. 28 ಕಡೆಯ ದಿನವಾಗಿದ್ದು, ಆಸಕ್ತ ತಂಡಗಳು 9483598761 ರಚನ್ ಪೊನ್ನಪ್ಪ ಕಾರ್ಯದರ್ಶಿ ಕೂರ್ಗ್ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಮಡಿಕೇರಿ, ಐನಂಡ ಸೋಮಣ್ಣ ಸಂಚಾಲಕರು ಕಾವೇರಿ ಕಾಲೇಜು ವೀರಾಜಪೇಟೆ ಇವರಲ್ಲಿ ನೊಂದಾಯಿಸಿಕೊಳ್ಳಬಹುದಾಗಿದೆ. ಪಂದ್ಯಾಟದಲ್ಲಿ ಗೆದ್ದವರಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವದು ಎಂದು ಹೇಳೀದರು.
ಕೂರ್ಗ್ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಕಾರ್ಯದರ್ಶಿ ರಚನ್ ಪೊನ್ನಪ್ಪ ಮಾತನಾಡಿ ಕ್ರೀಡಾತಾರೆ ದ್ಯಾನ್ಚಂದ್ ಅವರ ಹುಟ್ಟುಹಬ್ಬದ ಪ್ರಯುಕ್ತ ಜಿಲ್ಲಾ ಮಟ್ಟದ ಪಂದ್ಯಾವಳಿಯನ್ನು ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ ನಡೆಸಲಾಗುತ್ತಿದೆ ಕಳೆದ 5 ವರ್ಷಗಳಿಂದ ಪಂದ್ಯಾವಳಿ ನಡೆಯುತ್ತಿದ್ದು, ಜಿಲ್ಲಾಡಳಿತ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೇಳಿದರು.
ಗೋಷ್ಠಿಯಲ್ಲಿ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಅಧ್ಯಕ್ಷ ಮಹಮದ್ ಆಸಿಫ್, ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಣಯ್ಯ, ಪಂದ್ಯಾಟದ ಸಂಚಾಲಕ ಐನಂಡ ಸೋಮಣ್ಣ, ದ್ಯೆಹಿಕ ಶಿಕ್ಷಣ ನಿರ್ದೇಶಕಿ ಡಾ. ದೇಚಮ್ಮ ಉಪಸ್ಥಿತರಿದ್ದರು.