ಕೂಡಿಗೆ, ಆ. 23: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಡೆ ಬೆಟ್ಟ ಹಾಡಿಗೆ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಾರಿ ಮಳೆಯಿಂದಾಗಿ ಹಾಡಿಯ ಕೆಲವು ಮನೆಗಳು ಬೀಳುವ ಹಂತ ತಲಪಿರುವದನ್ನು ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಆರ್. ಮಂಜುಳಾ, ತಾಲೂಕು ಪಂಚಾಯಿತಿ ಸದಸ್ಯ ಗಣೇಶ್ ಪರಿಶೀಲಿಸಿ ಮುಂದಿನ ಮಾಸಿಕ ಸಭೆಯಲ್ಲಿ ಚರ್ಚಸಿ ಸಮಾಜ ಕಲ್ಯಾಣ ಇಲಾಖೆ, ಗಿರಿಜನ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಮನೆಗಳನ್ನು ನೀಡುವಂತೆ ಫಲಾನುಭವಿ ಪಟ್ಟಯಲ್ಲಿ ಹೆಸರನ್ನು ಸೇರಿಸಿ, ಮುಂದಿನ ಸಾಲಿನಲ್ಲಿ ನಿರ್ಮಾಣಗೊಳಿಸಲು ಪ್ರಯತ್ನಿಸುವದಾಗಿ ತಿಳಿಸಿದರು. ಈ ಸಂದರ್ಭ ಹಾಡಿ ಪ್ರಮುಖರು ಮತ್ತು ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.