ಸಿದ್ದಾಪುರ, ಆ. 21: ತೀವ್ರ ಮಳೆಯಿಂದ ಪ್ರವಾಹಕ್ಕೆ ಸಿಲುಕಿ ಹಾನಿಗೊಳಗಾಗಿದ್ದ ಕುಂಬಾರಗುಂಡಿ ಹಾಗೂ ಕರಡಿಗೋಡು, ತೋರ ಗ್ರಾಮಗಳಿಗೆ ಬಿಜೆಪಿ ಸರ್ಕಾರದ ನೂತನ ಸಚಿವ ಸುರೇಶ್ ಕುಮಾರ್ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕರಡಿಗೋಡು, ಕುಂಬಾರ ಗುಂಡಿ, ತೋರ ಗ್ರಾಮಗಳಿಗೆ ತೆರಳಿದ ಸಚಿವರು ಕುಸಿಯಲ್ಪಟ್ಟ ಮನೆಗಳನ್ನು ವೀಕ್ಷಿಸಿದರಲ್ಲದೆ ಸಂತ್ರಸ್ತರು ಹಾಗೂ ಮೃತರಾದವರ ಕುಟುಂಬದವರ ಅಳಲನ್ನು ಆಲಿಸಿದರು. ಬಳಿಕ ಮಾಕುಟ್ಟಕ್ಕೂ ಭೇಟಿ ನೀಡಿ ಪರಿಶೀಲಿಸಿದರು.ಸಂಪುಟ ತೀರ್ಮಾನ ಈ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ನಿನ್ನೆ ದಿನ ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟ ರಚನೆಯಾಗಿದ್ದು ನಂತರ ನಡೆದ ಔಪಚಾರಿಕ ಸಭೆಯಲ್ಲಿ ರಾಜ್ಯದಲ್ಲಿನ ಪ್ರವಾಹ ಪರಿಶೀಲನೆ ಸಂಬಂಧ ಒಬ್ಬೊಬ್ಬ ಸಚಿವರಿಗೆ ಒಂದೊಂದು ಜಿಲ್ಲೆಗಳ ಜವಾಬ್ದಾರಿ ವಹಿಸಲಾಗಿದೆ. ತನ್ನನ್ನು ಕೊಡಗು ಜಿಲ್ಲೆಗೆ ನಿಯೋಜಿಸಲಾಗಿದೆ. ಆದ್ದರಿಂದ ತಾನು ಇಂದು ಕೊಡಗಿಗೆ ಆಗಮಿಸಿದ್ದು ಪ್ರವಾಹದಿಂದ ಇಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಅವಲೋಕಿಸಿ ರಾಜ್ಯ ಸಂಪುಟಕ್ಕೆ ವರದಿ ಸಲ್ಲಿಸಲಿದ್ದೇನೆ ಎಂದರು. ಸಂತ್ರಸ್ತರಿಗೆ ತುರ್ತು ಪರಿಹಾರವಾಗಿ 10 ಸಾವಿರ ಹಾಗೂ ಮನೆ ಕಟ್ಟಿಕೊಳ್ಳಲು ರೂ. 5 ಲಕ್ಷ ಸರ್ಕಾರ ನೀಡಲಿದೆ ಎಂದರು. ಕಳೆದ ಬಾರಿ ಉಂಟಾದ ಪ್ರಾಕೃತಿಕ ವಿಕೋಪ ಸಂದರ್ಭ ಹಿಂದಿನ ಸರ್ಕಾರ ಕೈಗೊಂಡ ಪರಿಹಾರ ಕಾರ್ಯಗಳ ಪ್ರಗತಿ; ಪ್ರಸಕ್ತ ವರ್ಷ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕೂಲಂಕಷವಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾರ್ಯಪ್ರವೃತ್ತರಾಗುವದಾಗಿ ಸಚಿವರು ಭರವಸೆಯಿತ್ತರು. ನದಿತೀರದಲ್ಲಿರುವ ಸುಮಾರು 200 ಕುಟುಂಬಗಳನ್ನು ಸುರಕ್ಷ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲು ಅಧಿಕಾರಿಗಳು ಈಗಾಗಲೇ ಸ್ಥಳ ಗುರುತಿಸಿದ್ದು, ಆದಷ್ಟು ಶೀಘ್ರ ಸ್ಥಳಾಂತರ ಮಾಡಲಾಗುತ್ತದೆ ಎಂದರು.
ತೋರಕ್ಕೆ ಭೇಟಿ
ಭೂಕುಸಿತದಿಂದ ಸಾವು-ನೋವು ಸಂಭವಿಸಿದ ತೋರಾ ಗ್ರಾಮಕ್ಕೆ ಭೇಟಿ ನೀಡಿದ ಸಚಿವ ಸುರೇಶ್ ಕುಮಾರ್ ಅವರು ಕುಟುಂಬದವರನ್ನು ಕಳೆದುಕೊಂಡ ಪ್ರಭುಕುಮಾರ್ ಹಾಗೂ ಹರೀಶ್ ಇವರುಗಳಿಗೆ ಸಾಂತ್ವನ ಹೇಳಿದರು. ಮೃತರ ಕುಟುಂಬಗಳಿಗೆ ಸರ್ಕಾರದಿಂದ ಸಿಗಬೇಕಾದ
(ಮೊದಲ ಪುಟದಿಂದ) ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡುವ ಭರವಸೆ ನೀಡಿದರು. ಈ ವೇಳೆ ತೋರ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಪ್ರಭುಕುಮಾರ್ ಮನವಿ ಮಾಡಿದರು. ಕಾಣೆಯಾಗಿರುವ ತನ್ನ ಪತ್ನಿಯ ಶವ ದೊರಕುವವರೆಗೂ ಶೋಧ ಕಾರ್ಯವನ್ನು ನಿಲ್ಲಿಸದಂತೆ ಹರೀಶ್ ಕೋರಿದರು. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸುವದಾಗಿ ಸಚಿವರು ಆಶ್ವಾಸನೆಯಿತ್ತರು. ತೋರ ವ್ಯಾಪ್ತಿಯ ಕೆಲಸಂತ್ರಸ್ತರನ್ನು ಭೇಟಿ ಮಾಡಿದ ಸಚಿವರು ಸರ್ಕಾರದ ತುರ್ತು ಪರಿಹಾರ ಹಾಗೂ ಪರಿಹಾರ ಕಿಟ್ ಲಭಿಸಿದೆಯೆ ಎಂಬ ಬಗ್ಗೆ ಮಾಹಿತಿ ಪಡೆದರು. ವೀರಾಜಪೇಟೆ ಮಲೆತಿರಿಕೆ ಬೆಟ್ಟದಲ್ಲಿ ಬಿರುಕು ಕಾಣಿಸಿ ಕೊಂಡಿರುವ ಬಗ್ಗೆ ಜಿಲ್ಲಾಧಿಕಾರಿ ಯಿಂದ ಸಚಿವರು ಮಾಹಿತಿ ಪಡೆದರು.

ರೂಪಿಸಿದೆ ಎಂದರು. ಈ ಸಂದರ್ಭ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಎಸ್ಪಿ ಸುಮನ್, ಜಿಪಂ ಸಿಇಓ ಲಕ್ಷ್ಮಿ ಪ್ರಿಯ, ಉಪವಿಭಾಗಾಧಿಕಾರಿ ಜವರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್, ಮಹಿಳಾ ಘಟಕದ ಅಧ್ಯಕ್ಷೆ ಯಮುನ, ಜಿ.ಪಂ. ಸದಸ್ಯ ಅಚ್ಚಪಂಡ ಮಹೇಶ್ ಮತ್ತಿತರ ಪ್ರಮುಖರು ಇದ್ದರು.
-ವಾಸು, ಕೆಕೆಎಸ್, ಚಂದ್ರಮೋಹನ್.