ಸುಂಟಿಕೊಪ್ಪ, ಆ. 22: ರಾಷ್ಟ್ರೀಯ ಹೆದ್ದಾರಿಯ 7ನೇ ಹೊಸಕೋಟೆ ಹಾಗೂ ಕೊಡಗರಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ರಾತ್ರಿ ಹಗಲು ಬೀಡಾಡಿ ದನಗಳು ಅಡ್ಡಾಡುತ್ತಿದ್ದು, ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿವೆ. ಮಾಲೀಕರುಗಳು ಜಾನುವಾರುಗಳನ್ನು ಹಿಡಿದು ಕೊಟ್ಟಿಗೆಗೆ ಸಾಗಿಸಬೇಕು ಇಲ್ಲದಿದ್ದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವದೆಂದು ಪಿಡಿಓ ಆಸ್ಮಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿವೇಳೆ ದನ ಕರುಗಳು ಮಲಗುತ್ತಿದ್ದು ಇದರಿಂದ ಹಲವಾರು ರಸ್ತೆ ಅವಘಡಗಳು ಸಂಭವಿಸಿ ಪ್ರಾಣ ಹಾನಿಯಾಗಿದೆ ಎಂದು ಅವರು ತಿಳಿಸಿದ್ದಾರೆ.