ಮಡಿಕೇರಿ, ಆ. 22: ಮಡಿಕೇರಿ ನಗರ ದಸರಾ ದಶಮಂಟಪ ಸಮಿತಿಯ ಪ್ರಥಮ ಸಭೆಯು ತಾ.23 ರಂದು (ಇಂದು) ಬೆಳಗ್ಗೆ 11 ಗಂಟೆಗೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಸಿ.ಎಸ್. ರಂಜಿತ್ ಕುಮಾರ್ ಹಾಗೂ ಕಾರ್ಯದರ್ಶಿ ಎಂ.ಎಲ್. ಸತೀಶ್ ತಿಳಿಸಿದ್ದಾರೆ.
ಸಭೆಯಲ್ಲಿ 2019-20ನೇ ಸಾಲಿನ ನೂತನ ಕಾರ್ಯಾಧ್ಯಕ್ಷರು, ದಸರಾ ಉತ್ಸವದ ಉಪಾಧ್ಯಕ್ಷರು ಹಾಗೂ ಜಂಟಿ ಕಾರ್ಯದರ್ಶಿಗಳ ಆಯ್ಕೆ ನಡೆಯಲಿದ್ದು, ದೇವಾಲಯ ಸಮಿತಿಯ ಪದಾಧಿಕಾರಿಗಳು ಹೆಸರನ್ನು ಸೂಚಿಸುವ ಬಗ್ಗೆ ಚರ್ಚೆ ನಡೆಯಲಿದೆ.
ಅಲ್ಲದೆ ದಶಮಂಟಪ ಸಮಿತಿಯ ವತಿಯಿಂದ ಜಿಲ್ಲಾಧಿಕಾರಿಗಳ ಬಳಿ ನಿಯೋಗ ತೆರಳಲಿ ಮನವಿ ಸಲ್ಲಿಸಲಾಗುವದು ಎಂದು ಸತೀಶ್ ತಿಳಿಸಿದ್ದಾರೆ.