ಸುಂಟಿಕೊಪ್ಪ, ಆ.21: ಕರ್ನಾಟಕ ರಾಜ್ಯ ಬಾಸ್ಕೆಟ್‍ಬಾಲ್ ಕಿರಿಯರ ತಂಡಕ್ಕೆ ಸುಂಟಿಕೊಪ್ಪದ ರಕ್ಷಿತ್ ಆಯ್ಕೆಯಾಗಿದ್ದಾನೆ. ಬೆಂಗಳೂರಿನಲ್ಲಿ ನಡೆಯುತ್ತಿರುವ 6ನೇ ಮುಲ್ಕಿ ಸುಂದರ್ ರಾಂ ಶೆಟ್ಟಿ ಜ್ಞಾಪಕಾರ್ಥ ಅಖಿಲ ಭಾರತ ಆಹ್ವಾನಿತ ಬಾಸ್ಕೆಟ್‍ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾನೆ.

ಬೆಂಗಳೂರಿನ ಕ್ರೀಡಾ ಪ್ರಾಧಿಕಾರದ ವಸತಿ ನಿಲಯದ ಬಾಸ್ಕೆಲ್‍ಬಾಲ್ ತರಬೇತಿದಾರ ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿರುವ ರಕ್ಷಿತ್ ಬೆಂಗಳೂರಿನ ಸುರಾನ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ.

ಇತ್ತೀಚೆಗೆ ನಡೆದ 18ನೇ ವಯೋಮಿತಿಯೊಳಗಿನ ಬಾಲಕರ ಕರ್ನಾಟಕ ಬಾಸ್ಕೆಟ್‍ಬಾಲ್ ಚಾಂಪಿಯನ್ ಶಿಪ್‍ನಲ್ಲಿ ದ್ವಿತೀಯ ಸ್ಥಾನ ಡಿವೈಇಎಸ್ ತಂಡದ ಪರವಾಗಿ ಪಡೆದಿದ್ದಾನೆ. ರಕ್ಷಿತ್ ಸುಂಟಿಕೊಪ್ಪದ ಕೆ.ಎಸ್.ಅನಿಲ್‍ಕುಮಾರ್, ನಿಮಿಷ ದಂಪತಿ ಪುತ್ರ.