ವೀರಾಜಪೇಟೆ, ಆ.21: ತಾ. 9ರಂದು ವೀರಾಜಪೇಟೆಗೆ ಸಮೀಪದ ತೋರ ಗ್ರಾಮದಲ್ಲಿ ಉಂಟಾದ ಭೀಕರ ಭೂ ಕುಸಿತದಲ್ಲಿ ಮೃತರಾದ ಅನಸೂಯ (36) ಅವರ ಪತಿ ಪ್ರಭುಕುಮಾರ್ ಅವರಿಗೆ ಭಾರತೀಯ ಜೀವ ನಿಗಮದ ವತಿಯಿಂದ ವಿಮಾ ಪಾಲಿಸಿ ಮೊತ್ತ 11 ಲಕ್ಷ 47 ಸಾವಿರ ರೂ.ಗಳ ಚೆಕ್‍ನ್ನು ಹಸ್ತಾಂತರಿಸಲಾಯಿತು. ಅನಸೂಯಾ ಅವರು ರೂ. 5ಲಕ್ಷ ರೂ.ಗಳ ಮುಖಬೆಲೆಯ ಪಾಲಿಸಿಯನ್ನು ಇತ್ತೀಚೆಗಷ್ಟೆ ಪಡೆದುಕೊಂಡಿದ್ದರು.
ಇಂದು ತೋರ ಗ್ರಾಮದಲ್ಲಿರುವ ಅನಸೂಯಾ ಅವರ ಮನೆಗೆ ಭೇಟಿ ನೀಡಿದ ವೀರಾಜಪೇಟೆ ಜೀವ ವಿಮಾ ಶಾಖಾಧಿಕಾರಿ ಟಿ.ಎನ್.ಮೋಹನ್‍ಕುಮಾರ್ ಅವರ ನೇತೃತ್ವದ ತಂಡದಲ್ಲಿ ಶಾಖಾ ಸಿಬ್ಬಂದಿಗಳು ವಿಮಾ ಮೊತ್ತವನ್ನು ಪಾವತಿಸಿದರು.