ಮಡಿಕೇರಿ, ಆ. 20 : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು, ಎನ್‍ಎಸ್‍ಎಸ್ ಘಟಕ ಹಾಗೂ ರೋಟರ್ಯಾಕ್ಟ್ ಘಟಕ ಇವರ ಸಹಕಾರದಲ್ಲಿ ಮುಳಿಯ ಫೌಂಡೇಶನ್ ಆಶ್ರಯದಲ್ಲಿ ತಾ. 21 ರಂದು (ಇಂದು) ಮಧ್ಯಾಹ್ನ 2 ಗಂಟೆಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ಒಂದು ಲಕ್ಷ ಸಸಿ ಬೀಜದ ಉಂಡೆಗಳನ್ನು ತಯಾರಿಸಿ ಎಸೆಯುವ ಅಭಿಯಾನ ಉದ್ಘಾಟನಾ ಸಮಾರಂಭ ಮತ್ತು ಕಾರ್ಯಾಗಾರ ನಡೆಯಲಿದೆ. ಎಫ್.ಎಂ.ಕೆ.ಎಂ.ಸಿ. ಕಾಲೇಜಿನ ಪ್ರಾಂಶುಪಾಲ ಡಾ. ಜಗತ್ ತಿಮ್ಮಯ್ಯ, ಮುಳಿಯ ಸಂಸ್ಥೆಯ ಮುಖ್ಯಸ್ಥ ಕೇಶವ ಪ್ರಸಾದ್ ಮುಳಿಯ, ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್‍ನ ಅಧ್ಯಕ್ಷ ಎಂ.ಆರ್. ಜಗದೀಶ ಇತರರು ಪಾಲ್ಗೊಳ್ಳಲಿದ್ದಾರೆ.