ಮಡಿಕೇರಿ, ಆ. 20: ಮಡಿಕೇರಿ ತಾಲೂಕಿನ ಭಾಗಮಂಡಲದ ಕೋಪಟ್ಟಿ ಗ್ರಾಮದಲ್ಲಿ ತಾ. 4 ರಂದು ಸುಮಾರು 3-4 ತಿಂಗಳ ಪರಿತ್ಯಕ್ತ ಹೆಣ್ಣು ಮಗುವನ್ನು ಭಾಗಮಂಡಲ-ಮಡಿಕೇರಿ ರಸ್ತೆ ಮಾರ್ಗದಲ್ಲಿ ಬಿಟ್ಟು ಹೋಗಿರುತ್ತಾರೆ. ಈ ಮಗುವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಶದಲ್ಲಿದ್ದು, ಮಗುವಿನ ಪೋಷಕರು ಅಥವಾ ಸಂಬಂಧಿಕರು ಯಾರಾದರೂ ಇದ್ದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಕೊಡಗು ಜಿಲ್ಲೆ ಅಥವಾ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಕೊಡಗು ಜಿಲ್ಲೆ ಅಥವಾ ಸ್ಥಳೀಯ ಪೊಲೀಸ್ ಠಾಣೆಯನ್ನು ಹಾಗೂ ದೂರವಾಣಿ 100 (ಪೊಲೀಸ್ ಕಂಟ್ರೂಲ್ ರೂಂ), 08272 – 228800 (ಜಿಲ್ಲಾ ಮಕ್ಕಳ ರಕ್ಷಣಾ ಘಟಕ) 224220 (ಮಕ್ಕಳ ಕಲ್ಯಾಣ ಸಮಿತಿ, ಮಡಿಕೇರಿ) ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ತಿಳಿಸಿದ್ದಾರೆ.