*ಸಿದ್ದಾಪುರ, ಆ. 20: ಮಹಾಮಳೆಯಿಂದ ವಿಕೋಪಕ್ಕೆ ಸಿಲುಕಿದ ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಳೆಗುಂಡಿ ಮತ್ತು ವಾಲ್ನೂರು ಹೊಳೆಕೆರೆ ಪೈಸಾರಿ ನಿವಾಸಿಗಳಿಗೆ ಇಲ್ಲಿನ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ಆಶ್ರಯ ಕಲ್ಪಿಸಿದ್ದು, ಅಲ್ಲಿರುವ 126 ಮಂದಿಯಲ್ಲಿ 120 ಮಂದಿ ಮನೆಗೆ ತೆರಳಿದ್ದಾರೆ. ಉಳಿದ 6 ಮಂದಿಯ ಮನೆಗಳು ಪ್ರವಾಹದಲ್ಲಿ ಕೊಚ್ಚಿಹೋಗಿದ್ದು, ಸ್ಥಳೀಯ ಕಾಫಿ ಬೆಳೆಗಾರರು ತಮ್ಮ ಲೈನ್ಮನೆಯಲ್ಲಿ ಆಶ್ರಯ ನೀಡಿದ್ದಾರೆ.
ಮಳೆಗೆ ಕೊಂಚ ಬಿಡುವು ಸಿಕ್ಕಿದ್ದು ಮನೆ ಮತ್ತು ಮನೆಯ ಪರಿಕರಗಳನ್ನು ಕಳೆದುಕೊಂಡವರು ಇದೀಗ ಸರ್ಕಾರ ನೀಡುವ ಪರಿಹಾರ ನಿರೀಕ್ಷೆಯಲ್ಲಿದ್ದಾರೆ.
-ಅಂಚೆಮನೆ ಸುಧಿ