*ಸಿದ್ದಾಪುರ, ಆ. 20: ಅಭ್ಯತ್‍ಮಂಗಲ ಗ್ರಾಮ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಹಾಗೂ ದೋಲ್ಪಾಡಿ ಕುಟುಂಬಸ್ಥರ ಮನೆಗೆ ತೆರಳುವ ರಸ್ತೆ ಮತ್ತು ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಮೋರಿ ಸಂಪೂರ್ಣ ಕುಸಿದು ಸಂಚಾರ ಸ್ಥಗಿತಗೊಂಡಿದೆ. ಇದೀಗ ಇಲ್ಲಿನ ನಿವಾಸಿಗಳು ಅರೆಕಾಡು ರಸ್ತೆಯನ್ನು ಅವಲಂಭಿಸಿದ್ದು, ಈ ರಸ್ತೆಯೂ ಸಂಚಾರಕ್ಕೆ ಅಯೋಗ್ಯವಾಗಿದೆ. ಇದರಿಂದ ರಸ್ತೆ ಸಂಪರ್ಕವಿಲ್ಲದೇ ಇಲ್ಲಿನ ಶಾಲಾ ವಿದ್ಯಾರ್ಥಿಗಳು ಮತ್ತು ಇತರೆ ಉದ್ಯೋಗಕ್ಕೆ ತೆರಳುವವರು ಪರಿತಪಿಸುವಂತಾಗಿದೆ.